ಸನ್ಮಾರ್ಗ ವಾರ್ತೆ
ಅಮೃತಸರ: ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಂಜಾಬ್ನಲ್ಲಿ ಹೊಸ ರಾಜಕೀಯ ಪಾರ್ಟಿ ರಚಿಸಲಿದ್ದಾರೆ. ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ರೈತ ಹೋರಾಟಕ್ಕೆ ಪರಿಹಾರ ಕಂಡುಹುಡುಕಲು ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸಹಕರಿಸಲಾಗುವುದು ಎಂದು ಬಿಜೆಪಿಗೆ ಅವರು ಭರವಸೆ ನೀಡಿದ್ದಾರೆ.
ಕೃಷಿ ಕಾನೂನಿನಲ್ಲಿ ಕೆಲವು ವಿಷಯಗಳನ್ನು ಕೈಬಿಟ್ಟು ಬಿಜೆಪಿಯೊಂದಿಗೆ ಸೇರಿ ಪ್ರವರ್ತಿಸುವ ವಿಷಯ ಪರಿಗಣನೆಯಲ್ಲಿದೆ ಎಂದು ಅಮರೀಂದರ್ ಸಿಂಗ್ರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಾಲ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ತೊರೆದು ಅಮರೀಂದರ್ ಬಿಜೆಪಿಗೆ ಹೋಗುತ್ತಾರೆ ಎಂಬ ಸುದ್ದಿ ಹರಡಿತ್ತು. ದಿಲ್ಲಿಗೆ ಬಂದು ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಸುರಕ್ಷಾ ಸಲಹೆಗಾಗರ ಅಜಿತ್ ಡೋವಲ್ರನ್ನು ಭೇಟಿಯಾಗಿದ್ದರು. ನಂತರ ಈ ಸುದ್ದಿಗೆ ರೆಕ್ಕಪುಕ್ಕಗಳು ಹುಟ್ಟಿಕೊಂಡಿದ್ದವು. ಮುಂದಿನ ವರ್ಷ ನಡೆಯವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿ ಅವರನ್ನು ಕೇಂದ್ರದಲ್ಲಿ ಕೃಷಿ ಸಚಿವರನ್ನಾಗಿ ಮಾಡಲಾಗುವುದು ಎಂಬ ಊಹಾಪೋಹಗಳು ಕೂಡ ಹರಡಿತ್ತು.
ಈಗಲೂ ತನಗೆ 20 ಶಾಸಕರ ಬೆಂಬಲ ಇದೆ ಎಂದು ಅಮರೀಂದರ್ ಸಿಂಗ್ ಹೇಳುತ್ತಿದ್ದಾರೆ. ಅಕಾಲಿದಳದಿಂದ ದೂರನಿಂತ ಧನ್ಸ, ಬ್ರಹ್ಮಪುತ್ರ ವಿಭಾಗಳನ್ನು ಸೇರಿ ಹೊಸ ಪಾರ್ಟಿ ಕಟ್ಟುವುದು ಅಮರೀಂದರ್ರ ಉದ್ದೇಶ. ಪಂಜಾಬ್ ಕಾಂಗ್ರೆಸ್ ಕಮಿಟಿಗೆ ನವಜೋತ್ ಸಿಧು ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಅಸಮಾಧಾನ ತಲೆದೋರಿತ್ತು. ಹೈಕಮಾಂಡ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿತ್ತು.












