ಜನನ ಪ್ರಮಾಣಪತ್ರವನ್ನು ಪೌರತ್ವ ದಾಖಲೆ ಮಾಡಲು ಹೊರಟ ಕೇಂದ್ರ ಸರಕಾರ

0
1475

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಜನನ ಪ್ರಮಾಣಪತ್ರವನ್ನು ಪೌರತ್ವ ದಾಖಲೆಯನ್ನಾಗಿ ಮಾಡಲು ಕೇಂದ್ರ ಸರಕಾರ ಹೊರಟಿದೆ ಎಂಬುದಾಗಿ ಸೂಚನೆ ಲಭಿಸಿದೆ. ಸೆಪ್ಟಂಬರ್ 18ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳ ನಡುವೆ ನಡೆದ ಮ್ಯಾರಥಾನ್ ಮೀಟಿಂಗ್‍ನ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ವರದಿ ತಿಳಿಸಿದೆ.

ಜನನ ಸರ್ಟಿಫಿಕೆಟ್ ಪೌರತ್ವ ದಾಖಲೆಯನ್ನಾಗಿ ಮಾಡುವುದು. ವ್ಯಾಪಾರ ಒಪ್ಪಂದದಲ್ಲಿ ಕೆಲಸ ಖಚಿತ ಪಡಿಸುವುದು. ಸಾರ್ವಜನಿ ಪರಿಸರ ಕಾನೂನು, ಕುಟುಂಬಗಳ ವಿವರ ಸಂಗ್ರಹ ಇತ್ಯಾದಿ ಅರುವತ್ತರಷ್ಟು ಪ್ರಧಾನ ತೀರ್ಮಾನಗಳು ವಿಶೇಷವಾಗಿ ಪರಿಗಣಿಸಿ ಜಾರಿಗೆ ತರಲು ಕೇಂದ್ರ ಸರಕಾರ ಮುಂದಾಗಿದೆ.

ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಸೂಚನೆಗಳನ್ನು ಅಧ್ಯಯನ ಮಾಡಿ ತುರ್ತು ವರದಿ ಸಲ್ಲಿಸಲು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬೆ ಇಲಾಖೆಗಳ ಕಾರ್ಯದರ್ಶಿಗಳಿಗೆ ವಿಶೇಷ ಸೂಚನೆ ನೀಡಿದ್ದಾರೆ. ಈ ವರದಿಯ ಪ್ರಕಾರ ಮುಂದಿನ ಕ್ರಮಗಳು ನಡೆಯಲಿದೆ.

ಸಿವಿಲ್ ಸರ್ವಿಸ್ ಪರೀಕ್ಷೆ, ವ್ಯಾಪಾರ ವಾತಾವರಣ ಅಭಿವೃದ್ಧಿ ಪಡಿಸಲು, ಮಾಹಿತಂತ್ರಜ್ಞಾನ ಆಡಳಿತ ನೀತಿಯಾಗಿ ಉಪಯೋಗಿಸಲು ನಿರ್ದೇಶಿಸಲಾಗಿದೆ. ದೇಶದ ಆರ್ಥಿಕ ಸ್ಥಿತಿ ಕೆಟ್ಟು ಹೋದ ಪರಿಸ್ಥಿತಿಯಲ್ಲಿ ಅದನ್ನು ಉತ್ತೇಜಿಸಲು ಯೋಜನೆ 60 ವಿಧ ಕಾರ್ಯಕ್ರಮಗಳಿಗೆ ಪ್ರಧಾನವಾಗಿ ಆದ್ಯತೆನೀಡಲಾಗುವುದು.