ಸೌದಿ ಅರೇಬಿಯ: ಮಸೀದಿಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮುಂದುವರಿಕೆ

0
602

ಸನ್ಮಾರ್ಗ ವಾರ್ತೆ

ಜಿದ್ದ: ಸೌದಿ ಅರೇಬಿಯದ ಮಸೀದಿಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮುಂದುವರಿಯಲಿದೆ ಎಂದು ಧಾರ್ಮಿಕ ವಿಷಯಗಳ ಸಚಿವಾಲಯ ತಿಳಿಸಿದೆ. ಸಂಬಂಧ ಪಟ್ಟ ಇಲಾಖೆಗಳ ಶಿಫಾರಿಸಿನ ಅಡಿಯಲ್ಲಿ ಈ ತೀರ್ಮಾನ ತಳೆಯಲಿದೆ. ಕೊರೋನ ಪರಿಸ್ಥಿತಿಯಂತೆ ತೀರ್ಮಾನವನ್ನು ಮರುಪರಿಶೀಲಿಸಲಾಗುವುದು. ಕೊರೋನ ನಿಯಂತ್ರಣಕ್ಕೆ ಬಂದರೂ ಸಾರ್ವಜನಿಕ ಆರೋಗ್ಯ ಅಥಾರಿಟಿ ಮಸೀದಿಯಲ್ಲಿ ಸಾಮಾಜಿಕ ಅಂತರ ಪಾಲಿಸಲು ಸೂಚಿಸಿದೆ. ಅದರ ಪಾಲನೆ ಮುಂದುವರಿಯಲಿದೆ.

ಮಸೀದಿಗೆ ಬರುವವರು ಸುರಕ್ಷೆ ಆರೋಗ್ಯ ಖಚಿತಪಡಿಸಲು ಕ್ರಮ ಕೈಗೊಳ್ಳಲು ಶ್ರಮಿಸಲಾಗುತ್ತಿದೆ. ಆರೋಗ್ಯ ಮುನ್ನೆಚ್ಚರಿಕೆ ಜಾರಿಗೊಳಿಸಲಾಗಿದೆಯೇ ಎನ್ನುವುದನ್ನು ನಿರೀಕ್ಷಿಸುವ ಕೆಲಸ ಮುಂದುವರಿಯಲಿದೆ. ಅಧಿಕೃತ ಮೂಲಗಳಿಂದ ಮಾತ್ರವೇ ವಿವರಗಳನ್ನು ಸ್ವೀಕರಿಸಲಾಗುವುದು. ರವಿವಾದಿಂದ ಸೌದಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳ ಸಳ ಮಾಡುವುದು ಶುರುವಾಗಿದೆ. ಸಾಮಾಜಿಕ ಅಂತರ ಪಾಲಿಸುವ ನಿಬಂಧನೆಯು ಎರಡು ಹರಮ್‍ಗಳಿಲ್ಲ. ಸಾಮಾಜಿಕ ಅಂತರ ಪಾಲನೆಗಾಗಿ ಅಂಟಿಸಲಾಗಿದ್ದ ಸ್ಟಿಕ್ಕರ್‌ಗಳನ್ನು ತೆಗೆಯಲಾಗಿದೆ.