ಸನ್ಮಾರ್ಗ ವಾರ್ತೆ
ಸೌದಿಯಲ್ಲಿ ಇನ್ನಷ್ಟು ಸಿನಿಮಾ ಥಿಯೇಟರುಗಳು ಸಿದ್ಧವಾಗುತ್ತಿವೆ. ಮುಂದಿನ ವರ್ಷದ ಕೊನೆಯಲ್ಲಿ 10 ನಗರಗಳಿಗೆ ಸಿನಿಮಾ ಥಿಯೇಟರ್ ಗಳು ವ್ಯಾಪಿಸಲಿವೆ ಎಂದು ವರದಿಯಾಗಿದೆ. ಪ್ರಸ್ತುತ ಸೌದಿಯ ಆರು ನಗರಗಳಲ್ಲಷ್ಟೇ ಸಿನಿಮಾ ಥಿಯೇಟರುಗಳು ಇವೆ.
ರಿಯಾದ್ನಲ್ಲಿ ನಡೆಯುತ್ತಿರುವ ಫ್ಯೂಚರ್ ಇನ್ವೆಸ್ಟ್ಮೆಂಟ್ ಇನಿಶಿಯೇಟಿವ್ ಸಮ್ಮೇಳನದಲ್ಲಿ ಇಗ್ನಸ್ ಲಹೂದ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
35 ವರ್ಷಗಳ ಬಳಿಕ 2018ರಲ್ಲಿ ಸೌದಿಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. 1980ರ ಆರಂಭದಲ್ಲಿ ಸೌದಿಯಲ್ಲಿ ಸಿನಿಮಾಕ್ಕೆ ನಿಷೇಧ ವಿಧಿಸಲಾಯಿತು. 2018 ಏಪ್ರಿಲ್ ತಿಂಗಳಲ್ಲಿ ಹಾಲಿವುಡ್ ಚಿತ್ರವಾದ ಬ್ಲಾಕ್ ಪಾಂಥರ್ ಪ್ರದರ್ಶನದೊಂದಿಗೆ ಸೌದಿ ಹೊಸ ಸಾಂಸ್ಕೃತಿಕ ಬದಲಾವಣೆಗೆ ತೆರೆದುಕೊಂಡಿತು ಎಂದವರು ಹೇಳಿದ್ದಾರೆ.












