ಬಿಹಾರದಲ್ಲಿ ಶರಾಬು ನಿಷೇಧ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ- ಸಿಎಂ ನಿತೀಶ್ ಕುಮಾರ್

0
387

ಸನ್ಮಾರ್ಗ ವಾರ್ತೆ

ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಶರಾಬು ನಿರೋಧವನ್ನು ಪುನರುಚ್ಚರಿಸಿದ್ದು ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳುವ ಮುನ್ನೆಚ್ಚರಿಕೆ ನೀಡಿದ್ದಾರೆ. ನಿತೀಶ್ ಕುಮಾರ್ ಸೋಮವಾರ ಜನತಾ ದರ್ಬಾರ್ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತಾಡುತ್ತಾ ಮಹಿಳೆಯರ ಬೇಡಿಕೆಯಂತೆ ಎಪ್ರಿಲ್ 2016ರಲ್ಲಿ ಪೂರ್ಣ ಶರಾಬು ನಿಷೇಧ ತರಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಡಳಿತ ಮತ್ತು ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಬಿಹಾರದಲ್ಲಿ ಶರಾಬು ಲಭಿಸುತ್ತಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ಖಂಡಿಸಿದರು.

ಶರಾಬು ಕುಡಿಯುವುದಿಲ್ಲ ಎಂಬ ಸಂಕಲ್ಪ ಮಾಡಿ ಎಂದು ಜನರಿಗೆ ನಿತೀಶ್ ಕುಮಾರ್ ಕರೆ ನೀಡಿದರು. ಎಲ್ಲರೂ ಶರಾಬು ಕುಡಿಯುವುದಿಲ್ಲ ಎಂಬ ಸಂಕಲ್ಪ ತೊಟ್ಟಿದ್ದಾರೆ. ನಿರಂತರ ಅಭಿಯಾನ ಈ ಕುರಿತು ನಡೆಯುತ್ತಿದೆ. ಪೊಲೀಸರು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಾರೆ. ಕಾನೂನು ಉಲ್ಲಂಘಿಸಿದರೆ ಅಂತಹವರು ಸಿಕ್ಕಿಬೀಳುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು.