ಅಫ್ಘಾನಿಸ್ತಾನದ ಮಿಲಿಟರಿ ಆಸ್ಪತ್ರೆಯ ಮೇಲೆ ಆತ್ಮಾಹುತಿ ದಾಳಿ:19 ಸಾವು

0
400

ಸನ್ಮಾರ್ಗ ವಾರ್ತೆ

ಕಾಬೂಲ್: ಅಫ್ಘಾನಿಸ್ತಾನದ ಮಿಲಿಟರಿ ಆಸ್ಪತ್ರೆಯಲ್ಲಿ ನಡೆದ ಸ್ಫೋಟದಿಂದಾಗಿ 19 ಮಂದಿ ಮೃತಪಟ್ಟಿದ್ದು, 43 ಮಂದಿ ಗಾಯಗೊಂಡಿದ್ದಾರೆ. ಮಿಲಿಟರಿ ಆಸ್ಪತ್ರೆಯನ್ನು ಗುರಿಯಾಗಿಟ್ಟು ಅವಳಿ ಸ್ಫೋಟ ನಡೆದಿದೆ ಎಂದು ಅಫ್ಘಾನ್ ಗೃಹ ಸಚಿವಾಲಯದ ವಕ್ತಾರ ತಿಳಿಸಿದರು.

ಸರದಾರ್ ಮುಹಮ್ಮ್ ದೌದ್ ಖಾನ್ ಮಿಲಿಟರಿ ಆಸ್ಪತ್ರೆಯಲ್ಲಿ ಸ್ಫೋಟ ನಡೆದಿದ್ದು, ಆಸ್ಪತ್ರೆಯಲ್ಲಿದ್ದ ಜನರ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬುದಾಗಿ ವರದಿಯಾಗಿದೆ. 400 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದು, ಅವಳಿ ಸ್ಫೋಟ ನಡೆಯಿತೆಂದು ಅಫ್ಘಾನ್ ಸರಕಾರದ ವಕ್ತಾರ ಬಿಲಾವಲ್ ಕರೀಮಿ ತಿಳಿಸಿದರು.

ಮೋಟಾರು ಸೈಕಲ್‌ನಲ್ಲಿ ಬಂದ ಆತ್ಮಾಹುತಿ ಬಾಂಬರ್ ಆಸ್ಪತ್ರೆಯ ಬಾಗಿಲ ಸಮೀಪ ಸ್ಫೋಟಿಸಿಕೊಂಡಿದ್ದಾನೆ. ಎಷ್ಟು ಮಂದಿ ಹತರಾಗಿದ್ದಾರೆ ಎಂಬ ಕುರಿತು ನಿಖರವಾಗಿ ಅಧಿಕೃತ ವಿವರಗಳು ಹೊರಬಂದಿಲ್ಲ.