ನವಜಾತ ಶಿಶು ಹಾಗೂ ಎರಡು ವರ್ಷದ ಮಗುವಿಗೆ ಕೊರೋನ ಲಸಿಕೆ: ದಾದಿ ಅಮಾನತು

0
274

ಸನ್ಮಾರ್ಗ ವಾರ್ತೆ

ಬ್ರೆಝೀಲಿಯ: ಪ್ರಮಾದವಶಾತ್ ಕೊರೋನ ವೈರಸ್‍ನ ಪ್ರತಿರೋಧಕ ಲಸಿಕೆ ನೀಡಿದ ಪರಿಣಾಮವಾಗಿ ಎರಡು ನವಜಾತ ಶಿಶುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ವರ್ಷ ವಯಸ್ಸಿನ ಹೆಣ್ಣು ಮಗು ಹಾಗೂ ನಾಲ್ಕು ತಿಂಗಳ ಗಂಡು ಮಗುವಿಗೆ ಫೈಝರ್ ಲಸಿಕೆ ನೀಡಲಾಗಿತ್ತು.

ಡಿಫ್ತೀರಿಯ, ಟೆಟನಸ್, ಹೈಪಟೈಟಿಸ್ ಲಸಿಕೆ ಹಾಕಿಸಲು ಮಕ್ಕಳನ್ನು ತರಲಾಗಿತ್ತು ಆದರೆದಾದಿಯ ನಿರ್ಲಕ್ಷ್ಯದಿಂದಾಗಿ ಫೈಝರ್ ವ್ಯಾಕ್ಸಿನ್ ಚುಚ್ಚಲಾಗಿದೆ. ಚುಚ್ಚು ಮದ್ದಿನ ಬಳಿಕ ಎರಡು ಶಿಶುಗಳು ಅಸ್ವಸ್ಥವಾದವು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಮಕ್ಕಳಿಗೆ ವ್ಯಾಕ್ಸಿನ್ ಬದಲಾಗಿದ್ದು ಹೇಗೆ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ತಪ್ಪಿ ಕೊರೋನ ಲಸಿಕೆ ನೀಡಿದ ದಾದಿಯನ್ನು ಆಸ್ಪತ್ರೆಯಿಂದ ಅಮಾನತುಗೊಳಿಸಲಾಗಿದೆ. ಹಲವು ದೇಶಗಳಲ್ಲಿ ಫೈಝರ್ ಚುಚ್ಚುಮದ್ದನ್ನು ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಬ್ರೆಝಿಲ್‍ನಲ್ಲಿ ಹನ್ನರೆಡು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಫೈಝರ್ ಲಸಿಕೆ ನೀಡಲಾಗುತ್ತಿದೆ.