ಅಮೇರಿಕ: ಇಸ್ಲಾಮೊಫೋಬಿಕ್ ದಾಳಿಗಳನ್ನು ಖಂಡಿಸಿ ಡೆಮಾಕ್ರಟಿಕ್ ಪಾರ್ಟಿ ರಂಗ ಪ್ರವೇಶ

0
227

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕನ್ ಕಾಂಗ್ರೆಸ್ ಸದಸ್ಯರಾದ ಇಲ್ಹಾನ್ ಒಮರ್‌ರ ವಿರುದ್ಧ ಇಸ್ಲಾಮೊಫೋಬಿಕ್ ದಾಳಿ ಮಾಡಿದ ಕಾಂಗ್ರೆಸ್‍ನ ಸಹಸದಸ್ಯೆಯರ ವಿರುದ್ಧ ಡೆಮಾಕ್ರಟಿಕ್ ಪಾರ್ಟಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಕಳೆದ ದಿವಸ ಇಲ್ಹಾನ್ ಒಮರ್‌ರಿಗೆ 40 ಮಂದಿ ಡೆಮಾಕ್ರಟಿಕ್ ಸದಸ್ಯರು ಬೆಂಬಲ ವ್ಯಕ್ತಪಡಿಸಿ ರಂಗಪ್ರವೇಶಿಸಿದ್ದು, ಇಲ್ಹಾನ್‍ರನ್ನು ಜಿಹಾದಿ ಸ್ಕ್ವಾಡ್‍ನ ಸದಸ್ಯೆ ಎಂದು ಅಮೆರಿಕನಗ ಕಾಂಗ್ರೆಸ್‍ನ ಸಹಸದಸ್ಯೆ ಲೊರೆನ್‍ ಬೊಬಾರ್ ಟೀಕಿಸಿದ್ದರು. ಕಾಂಗ್ರೆಸ್‍ನ ಸದಸ್ಯರಾದ ಕೊರಿ ಬುಶ್, ಪ್ರಮೀಳಾ ಜೈಪಾಲ್, ಜಮಾಲ್ ಬೊಮನ್, ಆಂಡ್ರೆ ಕರ್ಸನ್ ಬೊಂಬಾರ್ಟ್‌ರ ವರ್ತನೆಯು ತಮ್ಮ ಜವಾಬ್ದಾರಿಯುತ ವಾತಾವರಣವನ್ನು ಅಪಾಯಕಾರಿಗೊಳಿಸಿದರೆಂದು ಪತ್ರ ಬರೆದಿದ್ದಾರೆ.

ಲೊರೆನ್‍ರನ್ನು ಅವರ ಕಮಿಟಿ ಅಸೈನ್‍ಮೆಂಟ್‍ಗಳಿಂದ ತೆಗೆದುಹಾಕಬೇಕೆಂದು ನಾವು ಆಗ್ರಹಿಸುವುದಾಗಿ ಡೆಮಾಕ್ರಟಿಕ್ ಪಾರ್ಟಿ ಪತ್ರದಲ್ಲಿ ಬೇಡಿಕೆ ಇರಿಸಿದ್ದಾರೆ. ಲೊರೆನ್ ಅಸಹಿಷ್ಣು ವಾತಾವರಣೆ ಸೃಷ್ಟಿಸುತ್ತಿದ್ದಾರೆ. ಅವರ ವರ್ತನೆಗಳನ್ನು ಸಹಿಸಿಕೊಂಡು ಮೌನವಾಗಿರಲು ಸಾಧ್ಯವಿಲ್ಲ ಎಂದು ಇಲ್ಹಾನ್‍ರ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಪ್ರತಿನಿಧಿಗಳೂ ಹೇಳಿದ್ದಾರೆ.