ಹೊಸ ಪಾರ್ಟಿ ಘೋಷಣೆಯತ್ತ ರೈತ ನಾಯಕ ಗುರ್ನಾಂಸಿಂಗ್ ಚುಡಾನಿ

0
658

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪಂಜಾಬ್ ಚುನಾವಣೆ ಸಹಿತ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದ್ದು, ರೈತ ನಾಯಕ ಗುರ್ನಾಮ್ ಸಿಂಗ್ ಚುಡಾನಿ ಹೊಸ ರಾಜಕೀಯ ಪಾರ್ಟಿ ಘೋಷಿಸಲು ಸಜ್ಜಾಗಿದ್ದಾರೆ. ಶನಿವಾರ ಚಂಡಿಗಡದಲ್ಲಿ ಹೊಸ ರಾಜಕೀಯ ಪಾರ್ಟಿಯನ್ನು ಅವರು ಘೋಷಿಸಲಿದ್ದಾರೆ.

ಕೇಂದ್ರ ಸರಕಾರದ ಮೂರು ಕೃಷಿ ಕಾನೂನು ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಸಮಯ ಹೋರಾಟ ನಡೆಸಿದ ಬಳಿಕ ಎದ್ದು ಬಂದು ಮೊದಲ ರಾಜಕೀಯ ಪಾರ್ಟಿಯ ಘೋಷಣೆ ಇದಾಗಲಿದೆ. ಸಂಯುಕ್ತ ಕಿಸಾನ್ ಮೋರ್ಚಾದ ಐದು ಸದಸ್ಯರ ಸಮಿತಿಯಲ್ಲಿ ಗುರ್ನಾಮ್ ಸಿಂಗ್ ಚಡೂನಿ ಇದ್ದರು. ರೈತ ಪ್ರತಿಭಟನೆಗೆ ಸಂಬಂಧಿಸಿ ಮೋದಿ ಸರಕಾರದೊಂದಿಗೆ ಚರ್ಚೆ ನಡೆಸಿದ ಪ್ರಮುಖ ವ್ಯಕ್ತಿಯಲ್ಲಿ ಅವರೊಬ್ಬರು.

ಕೇಂದ್ರ ಸರಕಾರದ ಮೂರು ರೈತ ಕಾನೂನುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಒಂದು ವರ್ಷದ ಪ್ರತಿಭಟನೆ ಡಿಸೆಂಬರ್ ಒಂಬತ್ತಕ್ಕೆ ಕೊನೆಗೊಳಿಸಲಾಗಿತ್ತು. ಕಳೆದ ತಿಂಗಳು ಮೂರು ಕೃಷಿ ಕಾನೂನನ್ನು ಸರಕಾರ ಹಿಂಪಡೆದಿತ್ತು. ನಂತರ ಪಾರ್ಲಿಮೆಂಟ್ ಮತ್ತು ರಾಜ್ಯಸಭೆಯಲ್ಲಿ ಕಾನೂನು ವಾಪಸು ಪಡೆಯುವ ಮಸೂದೆ ಮಂಡಿಸಿ ಮಂಜೂರು ಮಾಡಲಾಗಿತ್ತು.