ಹತ್ತು ದಿವಸಕ್ಕೆ ಯಾರೂ ನಗಬಾರದು: ವಿಚಿತ್ರ ಆದೇಶ ನೀಡಿದ ಉತ್ತರ ಕೊರಿಯಾ..!

0
428
ಉತ್ತರ ಕೊರಿಯ ನಾಯಕ ದಿ. ಕಿಂ ಜೊಂಗ್ ವಿಲ್‍

ಸನ್ಮಾರ್ಗ ವಾರ್ತೆ

ಪೊಂಗ್ಯಾಂಗ್: ತನ್ನ ಪ್ರಜೆಗಳು ಹತ್ತು ದಿವಸಗಳ ಕಾಲ ನಗಬಾರೆಂದು ಉತ್ತರ ಕೊರಿಯ ವಿಚಿತ್ರ ನಿಷೇಧ ಹೇರಿದೆ. ಉತ್ತರ ಕೊರಿಯ ನಾಯಕ ಕಿಂ ಜೊಂಗ್ ವಿಲ್‍ರ ನಿಧನದ ವಾರ್ಷಿಕ ಆಚರಣೆಗಾಗಿ ನಗುವನ್ನು ನಿಷೇಧಿಸಿದೆ.

ಡಿಸೆಂಬರ್ 17ಕ್ಕೆ ಇಲ್‍ರು ನಿಧನರಾಗಿ ಹತ್ತು ವರ್ಷ ಆಗುತ್ತಿದೆ. ನಿಧನದ ವಾರ್ಷಿಕ ಆಚರಣೆ ಸಲುವಾಗಿ ನಗುವುದು ಮಾತ್ರವಲ್ಲ ಹಲವು ನಿಯಂತ್ರಣಗಳನ್ನು ಸರಕಾರ ಹೇರಿದೆ. ಮದ್ಯ ಉಪಯೋಗ, ನಗು , ಮನರಂಜನೆಗೆ ನಿಷೇಧ ಜಾರಿಯಲ್ಲಿದೆ ಎಂದು ಗಡಿ ನಗರವಾದ ಸಿಂಜುವಿನ ನಿವಾಸಿ ರೇಡಿಯೊ ಫ್ರೀ ಏಷ್ಯದೊಂದಿಗೆ ಈ ವಿಚಾರ ತಿಳಿಸಿದ್ದಾರೆ. ಡಿಸೆಂಬರ್ 17ರಂದು ದಿನಸಿ ವಸ್ತು ಖರೀದಿಗೂ ನಿಷೇಧ ಇದೆ.

ನಿಷೇಧ ಉಲ್ಲಂಘಿಸಿದರೆ ಕಠಿಣ ಕ್ರಮಗಳನ್ನು ಪ್ರಜೆಗಳ ವಿರುದ್ಧ ಕೈಗೊಳ್ಳುತ್ತಾರೆ ಎಂದು ಆತ ಹೇಳಿದ್ದಾನೆ. ಹಿಂದಿನ ಶೋಕಾಚರಣೆ ಕಾಲದಲ್ಲಿ ನಿಷೇಧ ಉಲ್ಲಂಘಿಸಿದವರನ್ನು ಬಂಧಿಸಲಾಗಿತ್ತು. ಬಂಧಿಸಿಕೊಂಡು ಹೋದವರನ್ನು ಮತ್ತೆ ನೋಡಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಈ ವ್ಯಕ್ತಿ ಹೇಳಿದರು.

ದುಃಖಾಚರಣೆ ಸಮಯದಲ್ಲಿ ಮರಣಾ ನಂತರ ಕಾರ್ಯಕ್ರಮವನ್ನು, ಹುಟ್ಟುಹಬ್ಬ ಆಚರಣೆಗೆ ಅನುಮತಿ ಇಲ್ಲ. ಆದರೆ ಪ್ರಜೆಗಳಿಗೆ ಹೇರಿದ ನಿಷೇಧದ ಕುರಿತು ಉತ್ತರ ಕೊರಿಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಿಂ ಜೊಂಗ್ ಇಲ್‍ರ ಮರಣದ ನಂತರ ಕಿಂ ಜೊಂಗ್ ಇನ್ ಉತ್ತರ ಕೊರಿಯದ ಸರ್ವಾಧಿಕಾರಿಯಾಗಿ ಅಧಿಕಾರಕ್ಕೆ ಬಂದಿದ್ದಾರೆ.