ಸನ್ಮಾರ್ಗ ವಾರ್ತೆ
ನವದೆಹಲಿ: ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ NITI ಆಯೋಗ್ ಸದಸ್ಯ ವಿಕೆ ಪೌಲ್ ದೇಶದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. “ಒಂದು ವೇಳೆ ಬ್ರಿಟನ್ ಮಾದರಿಯಂತೆ ಓಮಿಕ್ರಾನ್ ಸೋಂಕು ಭಾರತದಲ್ಲಿ ಹರಡಿದರೆ ದೇಶದಲ್ಲಿ ಪ್ರತಿದಿನ 14 ಲಕ್ಷ ಪ್ರಕರಣಗಳು ವರದಿಯಾಗಬಹುದು. ಹಾಗಾಗಿ ಪ್ರತಿಯೊಂದು ಪ್ರಕರಣದ ಜೀನೋಮ್ ಅನುಕ್ರಮವನ್ನು ಮಾಡಲು ಸಾಧ್ಯವಿಲ್ಲ” ಎಂದು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಹೆಚ್ಚುತ್ತಿರುವ ಕರೋನಾ ಪ್ರಕರಣಕ್ಕೆ ಓಮಿಕ್ರಾನ್ ಸೋಂಕನ್ನು ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದರು, ಆದರೆ ಅದರ ಬಗ್ಗೆ ಇನ್ನೂ ಎಲ್ಲವೂ ಸ್ಪಷ್ಟವಾಗಿಲ್ಲ. ಈ ಕುರಿತು ಸಂಶೋಧನೆ ನಡೆಯುತ್ತಿದ್ದು, ಎಲ್ಲ ಹೊಸ ಬೆಳವಣಿಗೆಗಳ ಮೇಲೆ ಸರ್ಕಾರ ಕಣ್ಣಿಟ್ಟಿದೆ. ಓಮಿಕ್ರಾನ್ ಸ್ಟ್ರೈನ್ ಸೌಮ್ಯವಾದ ಸೋಂಕುಗಳನ್ನು ಮಾತ್ರ ಹರಡುತ್ತದೆ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಪೌಲ್ರವರು ಯುರೋಪಿನಲ್ಲಿ ಓಮಿಕ್ರಾನ್ ಸೋಂಕಿನ ವೇಗವನ್ನು ಎತ್ತಿ ತೋರಿಸಿದರು ಮತ್ತು ಅದನ್ನು ಭಾರತದ ಜನಸಂಖ್ಯೆಯೊಂದಿಗೆ ಹೋಲಿಸಿ ಕಳವಳ ವ್ಯಕ್ತಪಡಿಸಿದರು.
ಬ್ರಿಟನ್ನಲ್ಲಿ 14 ಸಾವಿರಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು
ಶುಕ್ರವಾರ, ಬ್ರಿಟನ್ ಒಮಿಕ್ರಾನ್ನ 3,201 ಪ್ರಕರಣಗಳನ್ನು ದಾಖಲಿಸಿದೆ. ಇದು ಒಂದೇ ದಿನದಲ್ಲಿ ಕಂಡುಬಂದ ಅತಿ ಹೆಚ್ಚು ಓಮಿಕ್ರಾನ್ ಪ್ರಕರಣಗಳಾಗಿವೆ. ಇಲ್ಲಿ ಹೊಸ ರೂಪಾಂತರದ ಒಟ್ಟು ಪ್ರಕರಣಗಳ ಸಂಖ್ಯೆ 14,909ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಬ್ರಿಟನ್ನಲ್ಲಿ 93,045 ಕೊರೋನಾ ಪ್ರಕರಣಗಳು ವರದಿಯಾಗಿರುವುದಾಗಿ ಬ್ರಿಟನ್ನ ಆರೋಗ್ಯ ಭದ್ರತಾ ಸಂಸ್ಥೆ ತಿಳಿಸಿದೆ.
ಸತತ ಮೂರನೇ ದಿನವೂ ಇಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು 1.19 ಕೋಟಿ ಕೊರೋನಾ ಪ್ರಕರಣಗಳು ದಾಖಲಾಗಿವೆ. ಫ್ರಾನ್ಸ್ನಲ್ಲಿ ಶುಕ್ರವಾರ 65 ಸಾವಿರಕ್ಕೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗಿವೆ. ಒಮಿಕ್ರಾನ್ ರೂಪಾಂತರವನ್ನು ಪರಿಚಯಿಸಿದ ನಂತರ ಡೆನ್ಮಾರ್ಕ್ ಮತ್ತು ನಾರ್ವೆಯಲ್ಲಿ ದೈನಂದಿನ ಸೋಂಕು ಪ್ರಕರಣಗಳಲ್ಲಿ ತೀವ್ರ ಹೆಚ್ಚಳವನ್ನು ಕಾಣುತ್ತಿವೆ.
ಪ್ರತಿ ಮಾದರಿಯ ಜೀನೋಮ್ ಸೀಕ್ವೆನ್ಸಿಂಗ್ ಸಾಧ್ಯವಾಗುವುದಿಲ್ಲ
ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿ ಭಾರತದಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದೆ ಮತ್ತು ಅದನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ ಎಂದು ಡಾ.ಪೌಲ್ ಹೇಳಿದರು. ಪ್ರತಿಯೊಂದು ಕೊರೋನ ಪ್ರಕರಣದ ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದ ಅವರು, ಇದು ರೋಗವನ್ನು ಗುರುತಿಸುವ ಸಾಧನವಲ್ಲ, ಆದರೆ, ಸಾಂಕ್ರಾಮಿಕವನ್ನು ನಿರ್ಣಯಿಸಲು ಮತ್ತು ಮೇಲ್ವಿಚಾರಣೆ ಮಾಡುವುದಾಗಿದಕ್ಕಾಗಿ ಪರೀಕ್ಷಿಸಲಾಗುತ್ತದೆ. ಪ್ರಸ್ತುತ ಸಾಕಷ್ಟು ವ್ಯವಸ್ಥಿತವಾಗಿ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ನಾವು ಭರವಸೆ ನೀಡಬಹುದು ಎಂದು ಪೌಲ್ ಹೇಳಿದರು.












