ಅಮೇರಿಕ: ಅಂಚೆ ಮೂಲಕ ಗರ್ಭಪಾತ ಮಾತ್ರೆಗಳ ಪೂರೈಕೆಗೆ ಅನುಮತಿ

0
469

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೇರಿಕಾದಲ್ಲಿ ಕ್ಲಿನಿಕ್‌ಗೆ ನೇರವಾಗಿ ಬರಲು ಸಾಧ್ಯವಾಗದ ಮಹಿಳೆಯರಿಗೆ ಗರ್ಭಪಾತ ಮಾತ್ರೆಗಳನ್ನು ಅಂಚೆಯಿಂದ ತರಿಸಿಕೊಳ್ಳಲು ತಾತ್ಕಾಲಿಕ ಅನುಮತಿ ನೀಡಲಾಗಿದೆ. ಈ ಕ್ರಮಕ್ಕೆ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್(ಎಫ್‍ಡಿಐ) ಅನುಮತಿ ನೀಡಿತು.

ಇದೇ ವೇಳೆ, ಗರ್ಭಪಾತ ಮಾತ್ರೆಗಳನ್ನು ಅಂಚೆ ಮೂಲಕ ವಿತರಿಸದಂತೆ ಅಮೆರಿಕದ 19 ರಾಜ್ಯಗಳಲ್ಲಿ ನಿಷೇಧವಿದ್ದು ಈ ಅನಮತಿಯೊಂದಿಗೆ ಅದು ರದ್ದಾಗಿದೆ. ಅಮೆರಿಕದಲ್ಲಿ ಗರ್ಭಪಾತ ಕಾನೂನಿನಲ್ಲಿ ತಿದ್ದುಪಡಿಗೆ ತರುವ ಬಗ್ಗೆ ನ್ಯಾಯಾಧೀಶರು ಪರಿಶೀಲಿಸುತ್ತಿದ್ದಾರೆ. ಹತ್ತು ವಾರದೊಳಗಿನ ಗರ್ಭಿಣಿಯರಿಗೆ ಈ ಮಾತ್ರ ಪಡೆಯುವ ಅನುಮತಿ ಇದೆ. ವಿಶೇಷ ಸರ್ಟಿಫಿಕೆಟ್ ಇರುವ ವೈದ್ಯರಿಗೆ ಮಾತ್ರ ಮದ್ದು ಸೂಚಿಸುವ ಅನುಮತಿ ಇದೆ. ಔಷಧಿ ವಿತರಿಸುವ ಕಂಪೆನಿಗಳು ಎಫ್‍ಡಿಐಯಲ್ಲಿ ನೋಂದಾಯಿಸಿಕೊಂಡಿರಬೇಕೆಂಬ ನಿಬಂಧನೆ ವಿಧಿಸಲಾಗಿದೆ.