ರೋಹಿಣಿ ಕೋರ್ಟ್ ಸ್ಫೋಟ ಪ್ರಕರಣ: ದೆಹಲಿ ಪೋಲಿಸರಿಂದ ಡಿಆರ್‌ಡಿಒ ವಿಜ್ಞಾನಿ ಬಂಧನ

0
428

ಸನ್ಮಾರ್ಗ ವಾರ್ತೆ

ನವದೆಹಲಿ: ರೋಹಿಣಿ ಕೋರ್ಟ್ ಸ್ಫೋಟ ಪ್ರಕರಣದಲ್ಲಿ ಡಿಆರ್‌ಡಿಒದ ಹಿರಿಯ ವಿಜ್ಞಾನಿ ಭರತ್ ಭೂಷಣ್ ಕಟಾರಿಯಾರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 9 ರಂದು ಸ್ಫೋಟ ಸಂಭವಿಸಿತ್ತು. ದೆಹಲಿ ಪೊಲೀಸರ ಪ್ರಕಾರ, ವಿಜ್ಞಾನಿಯಿಂದ ಸ್ಫೋಟಕಗಳನ್ನು ತಯಾರಿಸುವ ವಸ್ತುವೂ ಪತ್ತೆಯಾಗಿದ್ದು, ವಿಜ್ಞಾನಿಯು ತಮ್ಮ ನೆರೆಹೊರೆಯಲ್ಲಿ ವಾಸಿಸುವ ವಕೀಲರನ್ನು ಗುರಿಯಾಗಿಸಿ ಸ್ಫೋಟ ನಡೆಸಿದ್ದರೆನ್ನಲಾಗಿದೆ. ವಕೀಲರ ಜತೆಗಿನ ಹಳೆಯ ಜಗಳ ಈ ದುರಂತಕ್ಕೆ ಕಾರಣವೆನ್ನಲಾಗಿದೆ. ಸ್ಫೋಟಕಗಳನ್ನು ತಯಾರಿಸಲು ಅಮೋನಿಯಂ ನೈಟ್ರೇಟ್‌ನ್ನು ಬಳಸಲಾಗಿತ್ತು.

ಸ್ಪೋಟಕ್ಕೆ ಸಂಬಂಧಿಸಿ ಆ ದಿನ ರೋಹಿಣಿ ಕೋರ್ಟ್‌ಗೆ ಬಂದಿದ್ದ 1,000 ವಾಹನಗಳನ್ನು ವಿಶೇಷ ದಳದ ತಂಡವು ಪರಿಶೀಲನೆ ನಡೆಸಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನ ತಿಳಿಸಿದ್ದಾರೆ. ಈ ಅವಧಿಯಲ್ಲಿ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು, ತನಿಖಾ ತಂಡ ಅಂದು ನಡೆದ ವಿಚಾರಣೆ ಹಾಗೂ ನ್ಯಾಯಾಲಯಕ್ಕೆ ಹಾಜರಾದವರನ್ನೂ ಪರಿಶೀಲಿಸಿತ್ತು.