ಸನ್ಮಾರ್ಗ ವಾರ್ತೆ
ಮನಾಮ: ಬಹ್ರೇನ್ಗೆ ಆಗಮಿಸುವವರ ಪ್ರಯಾಣ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಹೊಸ ನಿಯಮಗಳು ಜನವರಿ 9ರ ಆದಿತ್ಯ ವಾರದಿಂದ ಜಾರಿಗೆ ಬರಲಿದೆ.
ಬಹ್ರೇನ್ಗೆ ಆಗಮಿಸುವವರಿಗೆ ಜನವರಿ 9 ಆದಿತ್ಯವಾರದಿಂದ ಒಂದು ಪಿಸಿಆರ್ ಟೆಸ್ಟ್ ಸಾಕಾಗುತ್ತದೆ. ಇದಕ್ಕೆ 12 ದೀನಾರ್ ಪಾವತಿಸಬೇಕು. ಈ ಮೊದಲು ಮೂರು ಪಿಸಿಆರ್ ಟೆಸ್ಟ್ ಮಾಡಬೇಕಿತ್ತು ಹಾಗೂ 36 ದೀನಾರ್ ಶುಲ್ಕವನ್ನು ಪಾವತಿಸಬೇಕಿತ್ತು.
ಎಲ್ಲಾ ಯಾತ್ರಿಕರು ಯಾತ್ರೆ ಆರಂಭಿಸುವುದಕ್ಕಿಂತ 72 ಗಂಟೆಗಳ ಒಳಗಡೆ ಕೊರೋನಾ ಟೆಸ್ಟ್ ಸರ್ಟಿಫಿಕೇಟನ್ನು ಹಾಜರುಪಡಿಸಬೇಕು. ವ್ಯಾಕ್ಸಿನ್ ಪಡೆದವರಿಗೂ ಪಡೆಯದವರಿಗೂ ಇದು ಅನ್ವಯವಾಗಲಿದೆ.
ವ್ಯಾಕ್ಸಿನ್ ಪಡೆಯದ 12 ವರ್ಷಕ್ಕಿಂತ ಮೇಲಿನ ಯಾತ್ರಿಕರು ವಾಸಸ್ಥಳದಲ್ಲಿ ಹತ್ತು ದಿನಗಳ ಕ್ವಾರಂಟೈನ್ಗೆ ಒಳಪಡಬೇಕು ಎಂದು ತಿಳಿಸಲಾಗಿದೆ.












