ಸನ್ಮಾರ್ಗ ವಾರ್ತೆ
ವೆಲ್ಲಿಂಗ್ಟನ್: ದೇಶದಲ್ಲಿ ಒಮಿಕ್ರಾನ್ ಹೆಚ್ಚಳವಾದ ಹಿನ್ನೆಲೆಯಲ್ಲಿ ನಿಗದಿಪಡಿಸಲಾಗಿದ್ದ ತನ್ನ ಮದುವೆಯನ್ನು ಮುಂದೂಡಿರುವುದಾಗಿ ನ್ಯೂಝಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡನ್ ತಿಳಿಸಿದ್ದಾರೆ. ದೇಶದಲ್ಲಿ ಒಂಬತ್ತು ಮಂದಿಗೆ ಒಮಿಕ್ರಾನ್ ದೃಢಗೊಂಡಿರುವ ಹಿನ್ನೆಲೆಯಲ್ಲಿ ತನ್ನ ಮದುವೆ ಸಮಾರಂಭ ಮುಂದೂಡಲು ನಿರ್ಧರಿಸಿದರು.
ನ್ಯೂಝಿಲೆಂಡಿನಲ್ಲಿ ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದವು. ಇದರೊಂದಿಗೆ ಹೆಚ್ಚಿನ ನಿಯಂತ್ರಣವನ್ನು ನ್ಯೂಝಿಲೆಂಡ್ ಘೋಷಿಸಿದೆ. ಸಮಾರಂಭಗಳಲ್ಲಿ ಲಸಿಕೆ ಸ್ವೀಕರಿಸಿದ ನೂರು ಮಂದಿ ಮಾತ್ರ ಭಾಗವಹಿಸಬಹುದು. ಈ ನಿಯಂತ್ರಣವನ್ನು ಘೋಷಿಸಿದ ಬಳಿಕ ತನ್ನ ಮದುವೆ ಈಗ ಇಲ್ಲ ಎಂದೂ ಅವರು ಹೇಳಿದರು.
ಮಹಾಮಾರಿಯಿಂದ ಇಂತಹ ಅನುಭವ ಆಗಿರುವ ಇತರ ನ್ಯೂಝಿಲೆಂಡಿಗರ ಜೊತೆ ತಾನೂ ಸೇರುತ್ತೇನೆ. ಈ ಪರಿಸ್ಥಿತಿಯಲ್ಲಿ ಸಿಲುಕಿಕೊಂಡ ಎಲ್ಲರೊಡನೆ ಕ್ಷಮೆ ಯಾಚಿಸುವೆನು ಎಂದು ಜಸಿಂತಾ ಹೇಳಿದರು. ಒಂದು ಮದುವೆಯಲ್ಲಿ ಭಾಗವಹಿಸಲು ಎರಡು ನಗರಗಳಲ್ಲಿ ಪ್ರಯಾಣಿಸಿ ಬಂದ ಒಂದು ಕುಟುಂಬದ ಒಂಬತ್ತು ಮಂದಿಗೆ ಒಮಿಕ್ರಾನ್ ದೃಢಪಟ್ಟಿದೆ. ಇವರು ಸಂಚರಿಸಿದ ವಿಮಾನದ ಸಿಬ್ಬಂದಿಗಳಿಗೆ ಕೊರೊನ ದೃಢಪಟ್ಟಿತ್ತು. ರವಿವಾರದಿಂದ ಭಾರೀ ನಿಯಂತ್ರಣಗಳನ್ನು ಘೋಷಿಸಲಾಗಿದ್ದು ಜನ ಸೇರುವ ಸಂಖ್ಯೆಯನ್ನು ಕೂಡ ಕಡಿಮೆ ಮಾಡಲಾಗಿದೆ. ಫೆಬ್ರುವರಿ ಕೊನೆಯವರಗೆ ನಿಯಂತ್ರಣ ಮುಂದುವರಿಯಲಿದೆ.
ನಿಶ್ಚಯಿಸಲಾದ ಮದುವೆ ಮುಂದಕ್ಕೆ ಹಾಕಿರುವುದಕ್ಕೆ ನಿಮಗೆ ಏನು ಅನಿಸುತ್ತದೆ ಎಂದು ಪತ್ರಕರ್ತರು ಕೇಳಿದಾಗ ಅರ್ಡನ್ ಅದು ಜೀವನ ಎಂದು ಉತ್ತರಿಸಿದ್ದಾರೆ.












