ಗೋವಾದಲ್ಲಿ ಆಮ್ ಆದ್ಮಿಗೆ ಹಿನ್ನಡೆ: ದಯಾನಂದ್ ನರ್ವೇಕರ್ ರಾಜೀನಾಮೆ

0
818

ಸನ್ಮಾರ್ಗ ವಾರ್ತೆ

ಪಣಜಿ: ಗೋವಾದಲ್ಲಿ ವಿಧಾನಸಭಾ ಚುನಾವಣೆ ನಿಕಟವಿರುವಂತೆಯೇ ಆಮ್ ಆದ್ಮಿ ಪಾರ್ಟಿಗೆ ದೊಡ್ಡ ಹೊಡೆತ ಬಿದ್ದಿದೆ. ಮಾಜಿ ಉಪಮುಖ್ಯಮಂತ್ರಿ ದಯಾನಂದ್ ನರ್ವೇಕರ್ ಪಾರ್ಟಿ ತೊರೆದಿದ್ದಾರೆ. ಪೊರ್‍ವೊರಿಂ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಅವರು ಸ್ಪರ್ಧಿಸಲಿದ್ದಾರೆ. 2021ರಲ್ಲಿ ಅವರು ಆಮ್ ಆದ್ಮಿಪಾರ್ಟಿಗೆ ಸೇರ್ಪಡೆಯಾಗಿದ್ದರು. ಏಳು ಬಾರಿ ಶಾಸಕರಾಗಿದ್ದವರು.

ಎಂಜಿಪಿ ಟಿಕೆಟ್‍ನಲ್ಲಿ 1977ರಲ್ಲಿ ತಿವಿಂ ಕ್ಷೇತ್ರದಿಂದ ಶಾಸಕರಾಗಿ ಮೊದಲ ಬಾರಿ ಗೋವಾ ವಿಧಾನಸಭೆ ಪ್ರವೇಶಿದ್ದರು. ಅಲ್‍ಡೊನ ಕ್ಷೇತ್ರದಿಂದ ಐದು ಬಾರಿ ಕಾಂಗ್ರೆಸ್ ಟಿಕೆಟಿನಲ್ಲಿ ಗೆದ್ದಿದ್ದರು. 1999 ನವೆಂಬರ್ ನಿಂದ 2000 ಅಕ್ಟೊಬರ್ ವೆಗೆ ಅವರು ಉಪಮುಖ್ಯಮಂತ್ರಿಯಾಗಿದ್ದರು. 1985 ರಿಂದ 1989ರವರೆಗೆ ಸ್ಪೀಕರ್ ಆಗಿದ್ದವರು. ವಿವಿಧ ಕ್ಯಾಬಿನೆಟ್ ಸಚಿವರಾಗಿದ್ದವರು. ಹಣಕಾಸು ಕಾನೂನು, ಕಾರ್ಮಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.