ಸರಳ ವಿವಾಹ ಸಂದೇಶ ನೀಡಲು ಜಮಾಅತೆ ಇಸ್ಲಾಮೀ ವತಿಯಿಂದ ಜಾಗೃತಿ ಅಭಿಯಾನ

0
1169

ನಾಗ್ಪುರ: ಮುಸ್ಲಿಮರ ವಿವಾಹಗಳಲ್ಲಿ ಸರಳತೆಯನ್ನು ಪಾಲಿಸುವಂತಹ ಸಂದೇಶವನ್ನು ಮನೆ ಮನೆ ಬಾಗಿಲಿಗೆ ತಲುಪಿಸಲು ಜಮಾಅತೆ ಇಸ್ಲಾಮೀ ಹಿಂದ್ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ. ಕಳೆದ ರವಿವಾರ 150 ಕ್ಕೂ ಹೆಚ್ಚು ಮಹಿಳೆಯರು ಈ ಅಭಿಯಾನಕ್ಕೆ ಸಾಕ್ಷಿಯಾದ ಘಟನೆಯು ನಾಗ್ಪುರದಲ್ಲಿ ನಡೆದಿದೆ.

ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ವತಿಯಿಂದ ನಾಟಕ ಪ್ರದರ್ಶನವು ನಡೆದಿದ್ದು ಈ ನಾಟಕದಲ್ಲಿ ಇಸ್ಲಾಮೀ ವಿವಾಹ ಕಲ್ಪನೆ, ಸರಳ ವಿವಾಹದ ಪ್ರಮುಖ್ಯತೆ ಹಾಗೂ ಪ್ರಾಯ ಪೂರ್ತಿಯಾದವರು ವಿವಾಹವಾಗುವುದರಲ್ಲಿ ವಿಳಂಬ ಮಾಡಬಾರದೆಂಬ ಸಂದೇಶವನ್ನು ನೀಡಿದೆ.ಇದಲ್ಲದೇ ವಿವಾಹದಲ್ಲಿ ದುಂದುಗಾರಿಕೆಗೆಯಾಗಲಿ, ಯುವಕನ ಯೋಗತ್ಯೆ ಹಾಗೂ ಆತನ ಸಂಪತ್ತಿನ ಮೇಲೆ ಆಧಾರಿತವಾಗಿಯಾಗಲಿ ಆದ್ಯತೆಯನ್ನು ನೀಡದೇ ಯುವಕನಲ್ಲಿರುವ ಧಾರ್ಮಿಕಡ ಪ್ರಜ್ಞೆಯನ್ನೂ ಸರಳತೆಯನ್ನೂ ಪರಿಗಣಿಸಬೇಕೆಂಬ ಸಂದೇಶವನ್ನು ಸಂದೇಶವನ್ನು ನೀಡಲಾಯ್ತು.

ಜಫರ್ ನಗರ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸಣ್ಣ ಸಣ್ಣ ಕಾರ್ಯಾಗಾರಗಳನ್ನು ಹಮ್ಮಿಕೊಂಡ ಜಮಾಅತ್, ಮಹಿಳೆಯರ ಮೇಲಾಗುತ್ತಿರುವ ಷೋಷಣೆಗಳು, ವರದಕ್ಷಿಣೆ ಕಿರುಕುಳಗಳ ಕುರಿತು ಇಸ್ಲಾಮ್ ದಏನನ್ನು ಭೋದಿಸುತ್ತದೆ ಎಂಬುದನ್ನು ತಿಳಿಸಲು ಪ್ರಯತ್ನಿಸಿತು‌. ವಯಸ್ಕ ಯುವಕ-ಯುವತಿಯರ ಹೆತ್ತವರಿಗೆ ದುಂದುಗಾರಿಕೆಯಿಂದ ದೂರವಿರುವಂತೆಯೂ, ವರದಕ್ಷಿಣೆಯು ಇಸ್ಲಾಮ್ ನಲ್ಲಿಲ್ಲದ ಆಚಾರವಾಗಿದೆ ಎಂಬುದರ ಕುರಿತು, ಇಸ್ಲಾಮಿನಲ್ಲಿ ವಧುವಿಗೆ ನೀಡಲೇ ಬೇಕಾದ ವಧುದಕ್ಷಿಣೆ(ಮಹರ್)ನ ಕುರಿತು ಮಾಹಿತಿ ನೀಡಲಾಯ್ತು.