ಚೀನಾ: ಪ್ರಿನ್ಸಿಪಾಲ್ ಜೊತೆಗೆ ಹೆಜ್ಜೆ ಹಾಕುವ ಶಾಲಾ ಮಕ್ಕಳ ವಿಡಿಯೋ ವೈರಲ್!

0
9817

ಶಾನ್ಶೀ: ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿಗಳು ತಮ್ಮ ಶಾಲಾ ಪ್ರಿನ್ಸಿಪಾಲರೊಂದಿಗೆ ಹೆಜ್ಜೆ ಹಾಕಿ ಕುಣಿಯುವ ಶಫಲ್ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾನ್ಶೀ ಪ್ರಾಂತ್ಯದ ಕ್ಸಿ ಗುವಾನ್ ಎಂಬ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ಜಾಂಗ್ ಪೆಂಗ್ಫೈ ತಾವು ಸ್ವತಃ ಶಫಲ್ ಡಾನ್ಸ್ ಕಲಿತರಲ್ಲದೇ ಮಕ್ಕಳಿಗೂ ಕೂಡ ಅದನ್ನು ಕಲಿಸಿದರು. ಇಂತಹ ಚಟುವಟಿಕೆಗೆ ಮುಂದಾಗಲಿರುವ ಕಾರಣವನ್ನು ಅವರು ತಿಳಿಸಿರುವುದು ನಿಜಕ್ಕೂ ಅಚ್ಚರಿ ಪಡಬೇಕಾದ ವಿಷಯವಾಗಿದೆ.

https://youtu.be/UkaJrzd6-hw

“ಶಾಲಾ ಮಕ್ಕಳು ಮೊಬೈಲ್ ಫೋನ್ ಹಾಗೂ ಕಂಪ್ಯೂಟರ್ ಗಳಲ್ಲಿಯೇ ಮುಳುಗಿರುವುದನ್ನು ಗಮನಿಸಿದ ಅವರು ಮಕ್ಕಳಿಗೆ ದೈಹಿಕ ವ್ಯಾಯಾಮದ ಅಗತ್ಯತೆ ಇರುವುದನ್ನು ಅವರು ಮನಗಂಡರು”. ನೇರವಾಗಿ ವ್ಯಾಯಾಮಕ್ಕೆ ಮಕ್ಕಳು ಆಸಕ್ತಿ ತೋರುವುದಿಲ್ಲವ ಎಂಬ ಕಾರಣಕ್ಕಾಗಿ ಶಫಲ್ ಡಾನ್ಸ್ ಕಲಿತ ಪ್ರಾಂಶುಪಾಲ ಜಾಂಗ್ ಪೆಂಗ್ಫೈ ಮಕ್ಕಳೊಂದಿಗೆ ದಿನನಿತ್ಯ ಶಫಲ್ ಡಾನ್ಸ್ ಮಾಡುತ್ತಾರೆ. ಮಕ್ಕಳೂ ಕೂಡ ಅವರೊಂದಿಗೆ ಆಸಕ್ತಿಯಿಂದ ಭಾಗವಹಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.