ಉವೈಸಿ ಕ್ಷತ್ರಿಯ ಹಿಂದು, ಶ್ರೀ ರಾಮನ ಉತ್ತರಾಧಿಕಾರಿ: ಬಿಜೆಪಿ ಸಂಸದ ಬ್ರಿಜ್‌ ಭೂಷಣ್

0
346

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ:  ಎಐಎಂಐಎಂ ಅಧ್ಯಕ್ಷ ಹೈದರಾಬಾದಿನ ಸಂಸದ ಅಸದುದ್ದೀನ್ ಉವೈಸಿಯವರನ್ನು ‘ಕ್ಷತ್ರಿಯ, ಹಿಂದು ಮತ್ತು ಶ್ರೀರಾಮನ ಉತ್ತರಾಧಿಕಾರಿ, ಎಂದು ಬಿಜೆಪಿ ನಾಯಕ, ಸಂಸದ ಬ್ರಿಜ್‍ ಭೂಷಣ್ ಶರಣ್ ಹೇಳಿದ್ದಾರೆ. ಜೊತೆಗೆ ತನ್ನ ಹಳೆಯ ಮಿತ್ರ ಎಂದು ಉವೈಸಿಯನ್ನು ಅವರು ಹೊಗಳಿದರು.

ಎಐಎಂಐಎಂ ನೊಂದಿಗೆ ಸಖ್ಯ ಮಾಡದ್ದಕ್ಕೆ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್‌ರನ್ನು ಅವರು ಟೀಕಿಸಿದರು. ಅಖಿಲೇಶ್- ಉವೈಸಿ ಪರಸ್ಪರ ಮುಸ್ಲಿಮ್ ಸಮುದಾಯದ ನೇತೃತ್ವ ಸ್ಥಾನವನ್ನು ವಹಿಸಲು ಪರಸ್ಪರ ಸ್ಪರ್ಧೆಯಲ್ಲಿದ್ದಾರೆ ಎಂದರು. ಗೊಂಡದ ಬಿಜೆಪಿ ಅಭ್ಯರ್ಥಿಯಾದ  ತನ್ನ ಪುತ್ರ ಪ್ರತೀಕ್ ಭೂಷಣ್ ಸಿಂಗ್ ಚುನಾವಣಾ ಪ್ರಚಾರದ ವೇಳೆ ಅವರು ಹೀಗೆಂದರು.

‘ಅಖಿಲೇಶ್‍’ರನ್ನು ಬ್ರಿಜ್‍  ಭೂಷಣ್ ‘ವಂಚಕ’ ಎಂದು ಕರೆದರು. ತಂದೆ ಮುಲಾಯಂ ಸಿಂಗ್, ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್‍ರನ್ನು ಅಖಿಲೇಶ್ ವಂಚಿಸಿದರು. ಸಮಾಜವಾದಿ ಪಾರ್ಟಿಗೆ ಬಂದ ಸ್ವಾಮಿ ಪ್ರಸಾದ್ ಮೌರ್ಯರನ್ನು ಕೂಡ ಅಖಿಲೇಶ್ ವಂಚಿಸಿದ್ದಾರೆ ಎಂದು ಅವರು ಹೇಳಿದರು. ಮೌರ್ಯರಿಗೆ 20-30 ಸೀಟು ಕೊಡುವುದಾಗಿ ಹೇಳಿ ಏನೂ ಕೊಟ್ಟಿಲ್ಲ ಎಂದು ಆರೋಪಿಸಿದರು. ಇತ್ತೀಚೆಗೆ ಉವೈಸಿ ಸಂಚರಿಸಿದ ಕಾರಿಗೆ ಹಿಂದುತ್ವ ತೀವ್ರವಾದಿಗಳು ಗುಂಡು ಹಾರಿಸಿದ್ದು, ಹೀಗೆ ಗುಂಡು ಹಾರಿಸಿದವರ ಮನೆಗೆ ತೆರಳಿ ಬಿಜೆಪಿ ನಾಯಕರು ಅಭಿನಂದಿಸಿದ್ದರು.