‘ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ’: 2008ರ ಅಹ್ಮದಾಬಾದ್ ಸ್ಫೋಟದ ಬಗ್ಗೆ ಪ್ರಧಾನಿ ಮೋದಿ

0
289

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ, ತಾನು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಸಂಭವಿಸಿದ 2008ರ ಅಹ್ಮದಾಬಾದ್ ಸ್ಫೋಟವನ್ನು ಉದ್ಧರಿಸಿ “ಆ ಕ್ಷಣವನ್ನು ನನಗೆ ಮರೆಯಲು ಸಾಧ್ಯವಿಲ್ಲ” ಎಂದರು. “ನಾನು ಆ ರಕ್ತಸಿಕ್ತವಾಗಿದ್ದ ಮಣ್ಣನ್ನು ಹಿಡಿದು ಪ್ರತಿಜ್ಞೆಗೈದಿದ್ದೆ; ಈ ಕೃತ್ಯದ ಹಿಂದಿರುವವರು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಪತ್ತೆಹಚ್ಚಿ ತಂದು ಶಿಕ್ಷೆಗೊಳಪಡಿಸಲು ತೀರ್ಮಾನಿಸಿದ್ದೆ” ಎಂದು ಹೇಳಿದರು. ಶುಕ್ರವಾರ, ವಿಶೇಷ ನ್ಯಾಯಾಲಯವು 56 ಜನರು ಹತರಾದ ಸ್ಫೋಟಕ್ಕೆ ಸಂಬಂಧಿಸಿ 38 ಜನರಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.