ಡಾನ್ಸ್ ಬಾರ್‌ಗೆ ದಾಳಿ; 28 ಯುವತಿಯರ ರಕ್ಷಣೆ, ಮೂವರ ಬಂಧನ

0
539

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೊರಮಂಗಲದಲ್ಲಿ ಪಬ್‍ನ ಮರೆಯಲ್ಲಿ ನಡೆಯುವ ಅನಧಿಕೃತ ಡ್ಯಾನ್ಸ್ ಬಾರ್‌ ಮೇಲೆ ಸೆಂಟ್ರಲ್ ಕ್ರೈಂ ಬ್ರಾಂಚಿನ ತಂಡ ದಾಳಿ ನಡೆಸಿತು. ಪಬ್‍ನ ಕೋಣೆಯೊಗಳಗಿರಿಸಲಾಗಿದ್ದ ಬೇರೆ ಬೇರೆ ರಾಜ್ಯಗಳ 28 ಯುವತಿಯರನ್ನು ರಕ್ಷಿಸಲಾಗಿದೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಗಪ್ತ ಮಾಹಿತಿಯ ಆಧಾರದಲ್ಲಿ ಅಪರಾಧ ಪತ್ತೆ ದಳ ದಾಳಿ ಸಂಘಟಿಸಿತ್ತು. ಪಬ್‍ನಲ್ಲಿ ಮದ್ಯ ವಿತರಿಸುವ ಕೆಲಸವೆಂದು ಹೇಳಿ ಬಳಿಕ ಯುವತಿಯರಿಂದ ಬಲವಂತವಾಗಿ ನೃತ್ಯ ಮಾಡಿಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದರು.

ಪಾರ್ಟಿ ನಂತರ ಪಬ್‍ನ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಯುವತಿಯರನ್ನು ಕೂಡಿ ಹಾಕಲಾಗುತ್ತಿತ್ತು ಎಂಬುದಾಗಿ ಪೊಲೀಸರು ತಿಳಿಸಿದ್ದು, ಪಬ್‍ನ ಇತರ ಉಪಕರಣಗಳನ್ನು ಕೂಡಾ ವಶಪಡಿಸಿಕೊಂಡಿದ್ದಾರೆ.