ಸನ್ಮಾರ್ಗ ವಾರ್ತೆ
ಬೆಂಗಳೂರು: ನಿರಂತರ ಜಾಗೃತಿಕಾರ್ಯ ನಡೆದರೂ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 571 ಬಾಲ್ಯ ವಿವಾಹಗಳು ನಡೆದಿವೆ ಎಂದು ವಿಧಾನಪರಿಷತ್ ಸದಸ್ಯ ಕೆ. ಗೋವಿಂದರಾಜ್ರವರ ಪ್ರಶ್ನೆಗೆ ಮಹಿಳಾ ಶಿಶುಕಲ್ಯಾಣ ಸಚಿವ ಹಾಲಪ್ಪ ಉತ್ತರಿಸಿದರು.
ಈ ಅವಧಿಯಲ್ಲಿ 2021-22 ವರ್ಷದಲ್ಲಿ ಅತೀಹೆಚ್ಚು ಬಾಲ್ಯ ವಿವಾಹಗಳು ನಡೆದಿದ್ದು, ಒಟ್ಟು 296 ಬಾಲ್ಯವಿವಾಹ ನಡೆದಿವೆ ಎಂದರು. ರಾಜ್ಯದಲ್ಲಿ ಲಾಕ್ಡೌನ್ ಕಾಲಾವಧಿಯಲ್ಲಿ ಬಾಲ್ಯ ವಿವಾಹಗಳ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಸಾಮಾಜಿಕ ಕಾಯಕರ್ತರು ಮುನ್ನೆಚ್ಚರಿಕೆ ನೀಡಿದ್ದರು.
ಕಳೆದ ಮೂರು ವರ್ಷದಲ್ಲಿ ಮಂಡ್ಯದಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹ ಪ್ರಕರಣ ವರದಿಯಾಗಿದೆ. 59 ಇಂತಹ ಮದುವೆಗಳೂ ನಡೆದಿವೆ. ರಾಮನಗರದಲ್ಲಿ 51 ಮತ್ತು ಹಾಸನದಲ್ಲಿ 42 ಪ್ರಕರಣಗಳು, ಉಡುಪಿಯಲ್ಲಿ ಮತ್ತಿತರ ಕಡೆ ಇಂತಹ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು.












