ಪ್ಯಾರಾಸಿಟಮಾಲ್ ಸಹಿತ 800 ಆವಶ್ಯಕ ಔಷಧಿಗಳಿಗೆ ತಟ್ಟಿದ ಬೆಲೆ ಏರಿಕೆ ಬಿಸಿ: ಎಪ್ರಿಲ್ 1 ರಿಂದ 10.7% ಹೆಚ್ಚಳ

0
506

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಆವಶ್ಯಕ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಪ್ಯಾರಾಸಿಟಮಾಲ್ ಸಹಿತ 800 ಅಗತ್ಯ ಔಷಧಿಗಳ ಬೆಲೆಗಳಲ್ಲಿ ಶೇ. 10.7ರಷ್ಟು ಹೆಚ್ಚಳಕ್ಕೆ ನ್ಯಾಶನಲ್ ಫಾರ್ಮಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ(ಎನ್‍ಪಿಪಿಎ) ಅನುಮತಿ ನೀಡಿದ್ದು, ಎಪ್ರಿಲ್ ಒಂದರಿಂದ ಹೊಸ ದರ ಜಾರಿಗೆ ಬರಲಿದೆ.

ಅಸಿಟ್ರೋಮೈಸಿನ್, ಸಿಪ್ರೊಫ್ಲಾಕ್ಸಾಸಿನ್ ಹೈಡ್ರೋಕ್ಲೋರೈಡ್, ಮೆಟ್ರೊನಿಡೊಸೊಲ್, ಫೆನಿಟೇನಿಯನ್ ಸೋಡಿಯಂ, ಫಿನೊಬಾರ್‍ಬಿಟಾನ್, ಸಹಿತ ಮಾತ್ರೆ-ಔಷಧಿಗಳ ಬೆಲೆ ಹೆಚ್ಚಲಿದ್ದು ಜ್ವರ, ಅಲರ್ಜಿ, ಹೃದ್ರೋಗ ಚರ್ಮರೋಗ, ರಕ್ತದೊತ್ತಡ, ಮದ್ದುಗಳು ದುಬಾರಿಯಾಗುತ್ತಿದೆ.

ಇಂಧನ, ಅಡಿಗೆ ಅನಿಲ ಬೆಲೆ ಹೆಚ್ಚಳದೊಂದಿಗೆ ಔಷಧಿಗಳ ಬೆಲೆಯೂ ಹೆಚ್ಚುತ್ತಿರುವುದು ಜನರಿಗೆ ಗಾಯದ ಮೇಲೆ ಬರೆ ಎರೆದಂತಾಗಿದೆ. ಕೇಂದ್ರ ಆರ್ಥಿಕ ವಿಷಯಗಳ ಸಲಹೆಗಾರ ಕಚೇರಿಯಿಂದ ಲಭಿಸಿದ 2021ರ ಒಟ್ಟು ಪಟ್ಟಿಯಲ್ಲಿ ಹೊಸ ದರ ಘೋಷಿಸಿದ್ದಾಗಿ ನ್ಯಾಶನಲ್ ಫರ್ಮಾಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ ತಿಳಿಸಿತು.