ಸನ್ಮಾರ್ಗ ವಾರ್ತೆ
ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್ 12ಕ್ಕೆ ನಡೆಯುವ ಉಪಚುನಾವಣೆಗಲಿಗೆ 133 ಯುನಿಟ್ ಕೇಂದ್ರ ಸೇನೆಯನ್ನು ನಿಯೋಜಿಸಲಾಗುತ್ತಿದೆ. ಮಾರ್ಚ್ 28ಕ್ಕೆ ಸೇನೆ ಪ.ಬಂಗಾಳದಲ್ಲಿ ಅಸಾನ್ಸೋಲ್, ಬಾಲಿಗಂಜ್ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು ಎಪ್ರಿಲ್ 16ಕ್ಕೆ ಫಲಿತಾಂಶ ಬರಲಿದೆ.
ಇದರಲ್ಲಿ 50 ಸಿಆರ್ಪಿಎಫ್ ಯುನಿಟ್ಗಳು, ಬಿಎಸ್ಎಫ್ ನ 45 ಯುನಿಟ್ಗಳು, ಸಿಐಎಸ್ಎಫ್ 10 ಯುನಿಟ್ಗಳು ಹಾಗೂ ಐಟಿಬಿಪಿ 13 ಯುನಿಟ್ಗಳು ಇರಲಿವೆ.
2021ರ ವಿಧಾನಸಭಾ ಚುನಾಣೆಯ ನಂತರ ವಿವಿಧ ಉಪಚುನಾವಣೆಗಳಲ್ಲಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೇಂದ್ರ ಸೇನೆಯನ್ನು ನಿಯೋಜಿಸಬೇಕೆಂದು ಬಿಜೆಪಿ ಹಲವು ಬಾರಿ ಆಗ್ರಹಿಸಿತ್ತು.
ಪಶ್ಚಿಮಬಂಗಾಳದಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ 102ರಲ್ಲಿ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿ ಕೇಂದ್ರ ಸೇನಾ ಮೇಲ್ನೋಟದಲ್ಲಿ ರಾಜ್ಯದಲ್ಲಿ ಮರು ಮತದಾನ ಆಗಬೇಕೆಂದು ಬಿಜೆಪಿ ಆಗ್ರಹಿಸಿತ್ತು.












