152 ರಿಂದ 154 ನೆ ಮಹಡಿಯವರೆಗೆ ಸ್ವಾಗತ ಕೊಠಡಿಗಳು ಸಜ್ಜು; ಭೂಮಿಯಿಂದ 775 ಮೀಟರ್ ಎತ್ತರದ ಮೇಲೆ ಎದ್ದು ನಿಂತ ಸ್ವಾಗತ ಕೊಠಡಿಗಳು!

ದುಬೈ: ಇನ್ನು ಮುಂದೆ ಅತಿಥಿಗಳನ್ನು ಅತಿ ಎತ್ತರದಲ್ಲಿ ಸ್ವಾಗತಿಸಲು ಬಯಸುವವರು ದುಬೈಯ ಬುರ್ಜ್ ಖಲೀಫವನ್ನು ಆಯ್ಕೆ ಮಾಡಿಕೊಳ್ಳಬಹುದು. ಬುರ್ಜ್ ಖಲೀಫಾ ಜಗತ್ತಿನ ಅತೀ ಎತ್ತರದ ಕಟ್ಟಡ ಎಂಬ ವಿಖ್ಯಾತಿಯೊಂದಿಗೆ ಜಗತ್ತಿನ ಅತಿ ಎತ್ತರದ ಸ್ವಾಗತಕೊಠಡಿಯಿರುವ ಸಮುಚ್ಚಯ ಎಂಬ ಪ್ರಖ್ಯಾತಿಯನ್ನು ಪಡೆದುಕೊಳ್ಳಲು ಸಜ್ಜುಗೊಂಡಿದೆ.
ಬುರ್ಜ್ ಖಲೀಫದ 152 ರಿಂದ 154 ನೆ ಮಹಡಿಯವರೆಗೆ ಸ್ವಾಗತ ಕೊಠಡಿಯನ್ನು ಸಜ್ಜುಗೊಳಿಸಲಾಗಿದೆ. ಆಕಾಶೆತ್ತರದ ಕಟ್ಟಡದಿಂದ ಸುಂದರ ಪ್ರಕೃತಿಯನ್ನು ರಮ್ಯ ನೋಟವನ್ನು ನೋಡಬಹುದು. ಬುರ್ಜ್ ಖಲೀಫಾ ದಲ್ಲಿ ಅರ್ಮಾನಿ ಹೊಟೇಲಿನ ರುಚಿಕರ ಊಟೋಪಹಾರವನ್ನು ಕೂಡ ಸವಿಯಬಹುದು. ‘ದಿ ಲಂಚ್, ಬುರ್ಜ್ ಖಲೀಫಾ’ ಎಂದೇ ಸ್ವಾಗತ ಕೊಠಡಿಗೆ ಹೆಸರಿಡಲಾಗಿದೆ.

ಸ್ವಾಗತ ಕೊಠಡಿಯು ಭೂಮಿಯಿಂದ 775 ಮೀಟರ್ ಎತ್ತರದಲ್ಲಿದ್ದು ಈ ಹಿಂದೆ ಜನರಿಗೆ ಕೇವಲ 148ನೆ ಮಹಡಿಯವರೆಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು. ಗಾಜಿನ ಗೋಡೆಯಿಲ್ಲದೆ ಟೆರೆಸ್ನಿಂದ ಹೊರಗಿನ ದೃಶಗಳನ್ನು ಸವಿಯ ಬಹುದಾಗಿದೆ. ಸಣ್ಣ ಸಭೆ ನಡೆಸುವ ಸೌಲಭ್ಯವನ್ನು ಕೂಡ ಒದಗಿಸಲಾಗಿದೆ. ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಮತ್ತು ಐದೂವರೆ ಗಂಟೆಯಿಂದ ಏಳೂವರೆ ಗಂಟೆಯವರೆಗೆ, ರಾತ್ರೆ ಏಳೂವರೆ ಗಂಟೆಯಿಂದ ತಡರಾತ್ರೆಯವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಸಮಯದಲ್ಲಿ ಬೇರೆ ಬೇರೆ ರೀತಿಯ ಆಹಾರವನ್ನು ಇಲ್ಲಿಗೆ ಸರಬರಾಜು ಮಾಡಲಾಗುವುದು. ಇದರೊಂದಿಗೆ ಸಂಗೀತ ಕಾರ್ಯಕ್ರಮಗಳು ಕೂಡ ನಡೆಯಲಿದೆ.
ಸಂಜೆಯ ವೇಳೆ ಒಬ್ಬರಿಗೆ 550 ದಿರ್ಹಾಮ್ ಟಿಕೆಟ್ ದರ ನಿಗದಿಪಡಿಸಿದ್ದು, ಸಂಜೆಯ ನಂತರ 600 ದಿರ್ಹಾಮದ ಟಿಕೆಟ್ ದರ ನಿಗದಿಗೊಳಿಸಲಾಗಿದೆ. ಬುರ್ಜ್ ಖಲೀಫಾದ ವೆಬ್ಸೈಟ್ನಲ್ಲಿ ಮೊದಲೇ ಟಿಕೆಟುಗಳನ್ನು ಕಾಯ್ದಿರಿಸಿಕೊಳ್ಳಬಹುದು. ಅರ್ಮಾನಿ ಹೊಟೇಲ್ನ ಲಾಬಿ ಮೂಲಕ ಸ್ವಾಗತ ಕೊಠಡಿಗೆ ಪ್ರವೇಶ ನೀಡಲಾಗುವುದು. ದುಬೈ ಮಾಲ್ನ ಬುರ್ಜ್ ಖಲೀಫಾ ಪ್ರವೇಶದ್ವಾರದ ಮೂಲಕವೂ ಸ್ವಾಗತ ಕೊಠಡಿ ಪ್ರವೇಶಿಸಬಹುದು.












