ತಂದೆಯ ಉಪಸ್ಥಿತಿಯಲ್ಲಿ ಇಸ್ಲಾಮ್ ಸ್ವೀಕರಿಸಿದ ತಮಿಳು ಸಂಗೀತ ಸಂಯೋಜಕ ಕುರಳರಸನ್

0
1844

ತಮಿಳು ನಟ ಸಿಲಂಬರಾಸನ್ ರವರ ಸಹೋದರ ಕುರಳರಸನ್ ಅವರು ಇಸ್ಲಾಂ ಸ್ವೀಕರಿಸಿದ್ದಾರೆ. ಅವರ ತಂದೆ ಟಿ ರಾಜೇಂದರ್ ಮತ್ತು ತಾಯಿ ಉಷಾ ಅವರ ಸಮ್ಮುಖದಲ್ಲಿ ಕುರಳರಸನ್ ಇಸ್ಲಾಂ ಧರ್ಮ ಸ್ವೀಕರಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕುರಳರಸನ್ ಅಲೈ ಮತ್ತು ಸೋನಾಲ್ತಾನ್ ಕಾದಲ ನಂತಹ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪಾಂಡ್ಯರಾಜ್ ಅವರ ಇದ್ ನಮ್ಮ್ ಆಲ್ ಎಂಬ ಚಿತ್ರಕ್ಕೆ ಅವರು ಸಿಂಬುವಿನ ಜೊತೆ ಸೇರಿ ಸಂಗೀತ ಸಂಯೋಜಿಸಿದ್ದರು. ಚೆನ್ನೈನ ಅಣ್ಣಾ ಸಲೈನ ಮಸೀದಿಯಲ್ಲಿ ಇಸ್ಲಾಮ್ ಸ್ವೀಕಾರ ಸಮಾರಂಭ ನಡೆಯಿತು.

“ಎಲ್ಲಾ ಧರ್ಮಗಳ ಜೊತೆ ಸಹಿಷ್ಣುತೆಯಿಂದಿರುವುದು ನನ್ನ ನೀತಿ. ಆದ್ದರಿಂದ ನಾನು ನನ್ನ ಮಗನ ನಿರ್ಧಾರವನ್ನು ಗೌರವಿಸುತ್ತೇನೆ” ಎಂದು ತಂದೆ ಟಿ ರಾಜೇಂದರ್ ಹೇಳಿದರು

. ಸಂಗೀತಗಾರರಾದ ಎ.ಆರ್. ರಹಮಾನ್ ಮತ್ತು ಯುವನ್ ಶಂಕರ್ ರಾಜನ್ ರವರೂ ಕೂಡ ತಮಿಳುನಾಡಿನಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು.