ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ನಾಯಿ ಕಡಿತ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡಿಎಂಸಿ ಅಧೀನದಲ್ಲಿರುವವರು ಅವರವರ ಸಾಕು ಪ್ರಾಣಿಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನೋಂದಾಣಿ ಮಾಡಿಕೊಳ್ಳಲು ಉದಾಸೀನತೆ ತೋರಿಸಿದವರ ವಿರುದ್ಧ ಕಾರ್ಪೊರೇಷನ್ ಕ್ರಮ ಜರಗಿಸುವುದಾಗಿ ಅಧಿಕಾರಿಗಳು ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ.
ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಸಾಕು ನಾಯಿಗಳ ನೋಂದಣಿಗೆ ನಿಯಮ ಇದ್ದರೂ ಜನರು ನೋಂದಣಿ ಮಾಡುವುದಿಲ್ಲ ಎಂದು ವೆರ್ಟನರಿ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದರು.
ನೊಯಿಡ, ಗಾಝಿಯಾಬಾದ್ಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿದ್ದು ಈ ಕುರಿತು ವರದಿಯಾಗುತ್ತಿವೆ. ನಾಯಿಗಳ ದಾಳಿ ಹೆಚ್ಚಿದ ಹಿನ್ನೆಲೆಯಲ್ಲಿ ಸಾಕು ಪ್ರಾಣಿಗಳನ್ನು ಹೊಂದಿರುವ ಎಲ್ಲರೂ ನೋಂದಾಯಿಸಬೇಕು ಎಂದು ಮುನ್ಸಿಪಲ್ ಕಾರ್ಪೊರೇಷನ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಬೀದಿ ನಾಯಿಗಳನ್ನು ದತ್ತು ಪಡೆದುಕೊಂಡವರಿಗೂ ಈ ನೋಂದಣಿ ಕಡ್ಡಾಯ ಎಂದು ಆದೇಶದಲ್ಲಿ ಹೇಳಲಾಗಿದೆ.
ನೋಂದಣಿ ಮಾಡಿದರೆ ಮಾತ್ರ ಹುಚ್ಚು ನಾಯಿ ವಿಷ ನಿರೋಧ ವ್ಯಾಕ್ಸಿನ್ ತೆಗೆದುಕೊಂಡಿರುವ ನಾಯಿಗಳ ಸಂಖ್ಯೆಯನ್ನು ದಾಖಲಿಸಿಕೊಳ್ಳಲು ಸಹಾಯಕವಾಗುತ್ತದೆ. ಜೊತೆಗೆ ನಾಯಿಗಳು ಕಾಣೆಯಾದರೂ ಹುಡುಕುವುದು ಸುಲಭವಾಗುತ್ತದೆ. ನೋಂದಣಿಗೆ ಆನ್ಲೈನ್ ಸೌಲಭ್ಯ ಕೂಡ ಒದಗಿಸಲಾಗಿದೆ ಎಂದು ಕಾರ್ಪೋರೇಷನ್ ತಿಳಿಸಿದೆ.












