ಕೈರೋ: ಬಲವಂತದಿಂದ ತಪ್ಪೊಪ್ಪಿಗೆಯನ್ನು ಪಡೆಯಲಾಗಿದೆ ಎಂದು ಹೇಳಲಾದ ಮೂರು ಮುಸ್ಲಿಂ ಬ್ರದರ್ ಹುಡ ಸದಸ್ಯರಿಗೆ ಈಜಿಪ್ಟ್ ಮರಣದಂಡನೆ ವಿಧಿಸಿದೆ ಎಂದು ಅಂತಾರಾಷ್ಟ್ರೀಯ ಹಕ್ಕುಗಳ ಗುಂಪು ಆರೋಪಿಸಿದೆ.
ಅಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳಿಕೆಯ ಪ್ರಕಾರ, ಈಜಿಪ್ಟ್ ನಲ್ಲಿ ಒಟ್ಟು ಆರು ಇಸ್ಲಾಮಿಸ್ಟ್ ಗಳನ್ನು ಎರಡು ವಾರಗಳ ಅಂತರದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗಿದೆ. 2013 ರಲ್ಲಿ ಕೈರೋದಲ್ಲಿ ಪೊಲೀಸ್ ಅಧಿಕಾರಿಗಳನ್ನು ಕೊಂದ ಆರೋಪಕ್ಕಾಗಿ ಇವರಲ್ಲಿ ಮೂವರನ್ನು ಗಲ್ಲಿಗೇರಿಸಲಾಗಿದ್ದರೆ, ಇತರ ಮೂವರನ್ನು ಕಳೆದ ವಾರ ಮರಣದಂಡನೆಗೆ ಒಳಪಡಿಸಲಾಗಿದೆ. ಅವರು 2014 ರಲ್ಲಿ ಮನ್ಸೌರಾ ನೈಲ್ ಡೆಲ್ಟಾ ಪಟ್ಟಣದಲ್ಲಿ ನ್ಯಾಯಾಧೀಶರ ಮಗನನ್ನು ಕೊಂದ ಪ್ರಕರಣಕ್ಕಾಗಿ ಕಳೆದ ವರ್ಷ ಶಿಕ್ಷೆಗೆ ಗುರಿಯಾಗಿದ್ದರು.
ಅಮ್ನೆಸ್ಟಿಯ ನಜಿಯಾ ಬೌನ್ಯಾಮ್ ಹೇಳುತ್ತಾರೆ, ಈ ಆರು ಮರಣದಂಡನೆಯನ್ನು “ಚಿತ್ರಹಿಂಸೆ ನೀಡಿ ಪಡಕೊಳ್ಳಲಾದ ತಪ್ಪೊಪ್ಪಿಗೆಗಳ ಆಧಾರದ ಮೇಲೆ” ವಿಧಿಸಲಾಗಿದೆ.












