ಹೊಸದಿಲ್ಲಿ, ಫೆ. 22: ಹ್ಯೂಮನ್ ರೈಟ್ಸ್ ವಾಚ್ ವರದಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 44 ಮಂದಿಯನ್ನು ಹತ್ಯೆ ಮಾಡಿದ್ದಾರೆ ಎಂದು ಬಹಿರಂಗಗೊಂಡಿದೆ. ಹಿಂದೂ ರಾಷ್ಟ್ರೀಯವಾದದ ನೆರಳಿನಲ್ಲಿ ದೇಶಾದ್ಯಂತ ನಡೆದಿರುವ ಹಲವು ದಾಳಿಗಳಲ್ಲಿ 280 ಮಂದಿ ಗಾಯಗೊಂಡಿದ್ದಾರೆ.
ಹ್ಯೂಮನ್ ರೈಟ್ಸ್ ವಾಚ್ನ 104 ಪುಟಗಳ ವರದಿಯಲ್ಲಿ 2015 ಮೇ ತಿಂಗಳಿನಿಂದ ಡಿಸೆಂಬರ್ 2018ರವರೆಗಿನ ಲೆಕ್ಕ ಪರಾಮರ್ಶೆ ಗೊಂಡಿದೆ. ದೇಶದಲ್ಲಿ ಗೋವಿನ ಹೆಸರಿನಲ್ಲಿ 100ಕ್ಕು ಹೆಚ್ಚು ದಾಳಿ ಘಟನೆ ನಡೆದಿದ್ದು ಹಿಂದೂ ರಾಷ್ಟ್ರ ವಾದಿಗಳ ದಾಳಿಯಲ್ಲಿ 36 ಮಂದಿ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರು ಹತ್ಯೆಯಾಗಿದ್ದಾರೆ ಹ್ಯೂಮನ್ ರೈಟ್ಸ್ ವಾಚ್ ತಿಳಿಸಿದೆ.












