ಕತರ್‌ ಮೇಲಿರುವ ಬಂದರು ನಿಷೇಧದ ಸಡಿಲಿಕೆ ಕುರಿತಾದ ಸುದ್ದಿಗಳೆಲ್ಲ ಸುಳ್ಳು ಎಂದ ಯುಎಇ

0
1525

ಅಬುಧಾಬಿ,ಫೆ.22: ಕತರ್‍ನೊಂದಿಗೆ ಹಡಗು ವ್ಯಾಪಾರದಲ್ಲಿದ್ದ ನಿರ್ಬಂಧವನ್ನು ಯುಎಇ ಸಡಿಲಿಕೆ ಮಾಡಿದ ಸೂಚನೆಯನ್ನು ಯುಎಇ ಸರಕಾರ ನೀಡಿದೆ ಎಂದು ಹೇಳಲಾದ ಆನ್ ಲೈನ್ ಸುದ್ದಿಗಳು ಸುಳ್ಳಾಗಿವೆ ಎಂದು ಯುಎಇ ಅಧೀಕೃತ ಮೂಲಗಳು ತಿಳಿಸಿವೆ.

ನಿನ್ನೆ ಆನ್‌ಲೈನ್ ಸುದ್ದಿ ಮಾಧ್ಯಮಗಳು “ಯುಎಇ ಬಂದರು ಸಚಿವಾಲಯ ಈ ಕುರಿತು ಸುತ್ತೋಲೆ ಹೊರಡಿಸಿದ್ದು ಉಭಯ ದೇಶಗಳ ನಡುವೆ ಬಂದರು ವ್ಯಾಪಾರ ಇನ್ನುಮುಂದೆ ಬಹುತೇಕ ಸುಗಮವಾಗಿ ನಡೆಯುವ ನಿರೀಕ್ಷೆಯಿದೆ” ಎಂದು ವರದಿ ಮಾಡಿದ್ದವು. ಆದರೆ ಈ ಸುದ್ದಿ ಸುಳ್ಳಾಗಿದ್ದು ನಿಷೇಧವನ್ನು ಸಡಲೀಕರಿಸುವ ಯಾವುದೇ ಹೇಳಿಕೆಗಳನ್ನು ಕಛೇರಿಯು ನೀಡಿಲ್ಲ ಎಂದು ಅದು ತಿಳಿಸಿದ್ದು ಜನರನ್ನು ದಾರಿಗೆಡಿಸಲು ಈ ರೀತಿ ಸುದ್ಧಿಗಳನ್ನು ಹರಿಬಿಡಲಾಗುತ್ತಿದೆ ಎಂದು ಆರೋಪಿಸಿದೆ.

ಇದಲ್ಲದೇ, ಬಂದರು ಕಾರ್ಗೋ ಸೇವೆಯನ್ನು ಇನ್ನು ಮುಂದೆ ಜಲಸಾರಿಗೆ ಮೂಲಕ ಯುಎಇಯಿಂದ ಕತರ್‍ಗೆ ಕತರ್‍ನಿಂದ ಯುಎಇಗೆ ಅಡಚಣೆಯಿಲ್ಲದೆ ನಡೆಸಲಾಗುವುದು. ಈ ಹಿಂದಿನ ಆದೇಶ ಪ್ರಕಾರ ಕತರ್ ಧ್ವಜ ಇರುವ ಮತ್ತು ಕತರ್ ಮಾಲಕತ್ವದ ಕತರ್ ಕಂಪೆನಿಗಳ ಹಡಗುಗಳು ಯುಎಇ ಬಂದರಿಗೆ ಪ್ರವೇಶಿಸದಂತೆ ತಡೆ ಹೇರಲಾಗಿತ್ತು ಎಂದು ತಿಳಿಸಿದ ನಿನ್ನೆಯ ಸುದ್ದಿಗಳು ಸುಳ್ಳಾಗಿವೆ.

2017 ಜೂನ್‍ನಲ್ಲಿ ಕತರ್ ವಿರುದ್ಧ ನಾಲ್ಕು ನೆರೆಯ ದೇಶಗಳ ದಿಗ್ಬಂಧನ ಜಾರಿಗೆ ಬಂದಿತ್ತು. ಈ ಹಿಂದೆ ಕಟ್ಟು ನಿಟ್ಟಿನ ದಿಗ್ಬಂಧದಿಂದಾಗಿ ಎರಡು ರಾಜ್ಯಗಳ ನೆಲ, ವಾಯು, ಜಲಮಾರ್ಗಗಳ ಎಲ್ಲ ವ್ಯವಹಾರಗಳಿಗೆ ಸಂಪೂರ್ಣ ನಿಷೇಧ ಹೇರಿತ್ತು.

ಕೇವಲ ಎರಡೇ ವರ್ಷದಲ್ಲಿ ಈಗ ಗಲ್ಫ್‌ ವಲಯದಲ್ಲಿ ನಿರೀಕ್ಷೆ ಹುಟ್ಟಿಸಿದ ನಿರ್ಧಾರದ ಮೂಲಕ ಯುಎಇ ಶುಭಾರಂಭ ನೀಡಿದೆ ಎಂದು ಕೆಲವು ಮಾಧ್ಯಮಗಳು ನಿರ್ಬಂಧ ಸಡಲಿಕೆಯ ಕುರಿತು ವರದಿ ಮಾಡಿರುವುದು ಅಧೀಕೃತವಲ್ಲ ಬದಲಾಗಿ ಇದು ಜನರನ್ನು ದಾರಿಗೆಡಿಸಲು ಬಳಸಿದ ಮಾರ್ಗ ಎಂದು ಕಛೇರಿಯು ಆರೋಪಿಸಿದೆ.