ಶಾರೂಕ್ ಖಾನ್ ಗೆ ಡಾಕ್ಟರೇಟ್‍: ಶಿಫಾರಸು ತಿರಸ್ಕರಿಸಿದ ಕೇಂದ್ರ ಸರಕಾರ

0
1232

ಹೊಸದಿಲ್ಲಿ, ಫೆ.22: ಬಾಲಿವುಡ್ ನಟ ಶಾರುಕ್ ಖಾನ್‍ಗೆ ಗೌರವಾರ್ಥ ಡಾಕ್ಟರೇಟ್ ನೀಡುವ ಜಾಮಿಅ ಮಿಲ್ಲಿಯ ವಿಶ್ವವಿದ್ಯಾನಿಲಯದ ಶಿಫಾರಸ್ಸನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿರಸ್ಕರಿಸಿದೆ. ಶಾರುಕ್‍ಗೆ ಬೇರೆ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಸಿಕ್ಕಿದೆ ಎಂದು ಕಾರಣ ನೀಡಿ ಕೇಂದ್ರ ಸರಕಾರ ವಿಶ್ವವಿದ್ಯಾನಿಲಯದ ಶಿಫಾರಸ್ಸನ್ನು ತಿರಸ್ಕರಿಸಿತು.

2016ರಲ್ಲಿ ಮೌಲಾನ ಆಝಾದ್ ನ್ಯಾಶನಲ್ ಉರ್ದು ವಿಶ್ವವಿದ್ಯಾನಿಲಯ ಗೌರವಾರ್ಥ ಪದವಿ ನೀಡಿ ಶಾರುಕ್‍ರನ್ನು ಸನ್ಮಾನಿಸಿತ್ತು. ಇದನ್ನು ಬೆಟ್ಟು ಮಾಡಿ ಸರಕಾರ ಈ ಕ್ರಮ ಕೈಗೊಂಡಿದೆ. ಕಳೆದ ವರ್ಷ ಕೊನೆಯಲ್ಲಿ ಜಾಮಿಅ ಮಿಲ್ಲಿಯ ವಿಶ್ವವಿದ್ಯಾನಿಲಯ ಶಾರುಕ್‍ಗೆ ಡಾಕ್ಟರೇಟ್ ಶಿಫಾರಸು ಮಾಡಿತ್ತು. ಅವರು ಜಾಮಿಅ ಮಿಲ್ಲಿಯದ ಮಾಸ್ ಕಮ್ಯುನಿಕೇಶನ್ ರಿಸರ್ಚ್ ಸೆಂಟರ್ ನ ಮಾಜಿ ವಿದ್ಯಾರ್ಥಿಯಾಗಿದ್ದಾರೆ. ಆದರೆ ಹಾಜರಿ ಕಡಿಮೆಯಾದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.