ಭಾರತದ ದಾಳಿಯ ಬಳಿಕ ತುರ್ತು ಸಭೆ ಕರೆದ ಪಾಕಿಸ್ತಾನದ ಪ್ರಧಾನಿ

0
1637

ಇಸ್ಲಾಮಾಬಾದ್: ಭಾರತೀಯ ವಾಯುಸೇನೆ ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ ಭಯೋತ್ಪಾದಕರ ಕೇಂದ್ರಕ್ಕೆ ಮಂಗಳವಾರ ಕಾರ್ಯಾಚರಣೆ ನಡೆಸಿದ್ದು ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ಕುರಿತು ಚರ್ಚಿಸಲು ತುರ್ತು ಸಭೆ ಕರೆದಿದ್ದಾರೆ.

ವಿದೇಶ ಸಚಿವ ಶಾ ಮಹಮೂದ್ ಕುರೈಶಿ ವಿದೇಶ ಸಚಿವಾಲಯದಲ್ಲಿ ತುರ್ತು ಸಭೆ ಕರೆದ ಬಳಿಕ ಪಾಕಿಸ್ತಾನಕ್ಕೆ ಆತ್ಮರಕ್ಷಣೆ ಮಾಡುವ ಹಕ್ಕಿದೆ. ಭಾರತದ ಕಾರ್ಯಾಚರಣೆಗೆ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದರು. ನಾವು ಇಂದಿನ ಕಾರ್ಯಾಚರಣೆಯಲ್ಲಿ ಏನು ನಡೆದಿದೆ ಎಂದು ವಿಶ್ವದ ಮುಂದಿಡಲು ಬಯಸಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾಜಿ ಪ್ರಧಾನಿ ನವಾಝ್ ಶರೀಫ್‍ರ ಮುಸ್ಲಿಂ ಲೀಗ್ ಕೂಡ ತುರ್ತು ಮೀಟಿಂಗ್ ಕರೆದಿದ್ದು, ಭಾರತ ಗಡಿರೇಖೆಯನ್ನು ಉಲ್ಲಂಘಿಸಿದೆ. ನಮಗೆ ನಮ್ಮ ರಕ್ಷಣೆ ಮಾಡುವ ಹಕ್ಕಿದೆ ಎಂದು ಹೇಳಿಕೊಂಡಿದೆ.