ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ರಿಷಿ ಸುನಕ್ ಇಂಗ್ಲೆಂಡಿನ ಪ್ರಧಾನಿಯಾದ ಬೆನ್ನಿಗೆ ‘ಭಾರತದಲ್ಲಿ ಮುಸ್ಲಿಂ ಪ್ರಧಾನಮಂತ್ರಿ’ ಎಂಬ ವಿಷಯವು ಚರ್ಚೆಗೆ ಬಂದಿದ್ದು, “ಭಾರತದಲ್ಲಿ ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗುವುದನ್ನು ನೋಡುವುದು ತನ್ನ ಕನಸು” ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ದಿನ್ ಉವೈಸಿ ಹೇಳಿಕೆ ನೀಡಿದ್ದರು.
ಇದ್ದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ಶೆಹಝಾದ್ ಪೂನಾವಾಲ, “ಹಿಜಾಬ್ ಧಾರಿ ಮಹಿಳೆಯನ್ನು ನೀವೇಕೆ ಎಐಎಂಐಎಂ ಮುಖ್ಯಸ್ಥರನ್ನಾಗಿ ಮಾಡಬಾರದು?” ಎಂದು ಟ್ವೀಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.
“ಹಿಜಾಬ್ ಧರಿಸಿದ ಓರ್ವ ಹೆಣ್ಣುಮಗಳು ಭಾರತದ ಪ್ರಧಾನಿಯಾಗಬೇಕಾಗಿದೆ ಎಂದು ಉವೈಸಿ ಆಶಿಸುತ್ತಾರೆ. ಇದಕ್ಕೆ ಸಂವಿಧಾನ ಯಾರನ್ನೂ ನಿಷೇಧಿಸುವುದಿಲ್ಲ. ಆದರೆ, ಹಿಜಾಬ್ ಧರಿಸಿದ ಮಹಿಳೆಯನ್ನು ನೀವೇಕೆ ಎಐಎಂಐಎಂ ಮುಖ್ಯಸ್ಥರನ್ನಾಗಿ ಮಾಡಬಾರದು?’. ನಾವು ಅದರಿಂದ ಆರಂಭಿಸೋಣವೇ?” ಎಂದು ಪೂನಾವಾಲ ಟ್ವೀಟ್ ಮಾಡಿದ್ದಾರೆ.
ರಿಷಿ ಸುನಕ್ ಇಂಗ್ಲೆಂಡಿನ ಪ್ರಧಾನಿಯಾದ ಬೆನ್ನಿಗೆ ಭಾರತದಲ್ಲಿ ‘ಮುಸ್ಲಿಂ ಪ್ರಧಾನಮಂತ್ರಿ’ ಎಂಬ ವಿಷಯವು ಚರ್ಚೆಗೆ ಬಂದಿದ್ದು, ಬಹುಸಂಖ್ಯಾತರ ಸರಕಾರ ಅಧಿಕಾರದಲ್ಲಿ ಇರುವಾಗ ಭಾರತದಲ್ಲಿ ಇದು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕರು ವಾದಿಸಿದ್ದರು. ಈ ವೇಳೆ, ಹಿಜಾಬ್ ಧರಿಸಿದ ಓರ್ವ ಮಹಿಳೆ ಪ್ರಧಾನಿಯಾಗಿರುವುದನ್ನು ನೋಡುವುದು ತನ್ನ ಕನಸು ಎಂದು ಉವೈಸಿ ಹೇಳಿದ್ದರು. ಈ ಹಿಂದೆ ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಾಗಲೂ ಇದೇ ಹೇಳಿಕೆಯನ್ನು ಉವೈಸಿ ನೀಡಿದ್ದರು.
Owaisi ji hopes that a Hijab wearing girl becomes PM of India! Well Constitution bars nobody but do tell us when will a Hijab wearing girl get to become President of AIMIM?
Let us start with that? pic.twitter.com/MdG4v0sky6
— Shehzad Jai Hind (@Shehzad_Ind) October 26, 2022












