ಬೇಹುಗಾರಿಕೆ: ವಿದೇಶಾಂಗ ಸಚಿವಾಲಯದ ಚಾಲಕನ ಬಂಧನ

0
308

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ವ್ಯಕ್ತಿಗೆ ಸೋರಿಕೆ ಮಾಡಿದ ಆರೋಪದಲ್ಲಿ ವಿದೇಶಾಂಗ ಸಚಿವಾಲಯದ ಚಾಲಕನನ್ನು ಬಂಧಿಸಲಾಗಿದೆ. ದಿಲ್ಲಿ ಪೊಲೀಸ್ ಅಪರಾಧ ಪತ್ತೆ ದಳ ವಿಭಾಗದವರು ಜವಹರಲಾಲ್ ನೆಹರೂ ಭವನದಿಂದ ಈತನನ್ನು ಬಂಧಿಸಿದ್ದಾರೆ.  ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯೊಂದಿಗೆ ಸಂಬಂಧ ಇರುವ ಮಹಿಳೆಯೊಬ್ಬರು  ಚಾಲಕನ ಜೊತೆಗೆ ಗೆಳೆತನ ಬೆಳೆಸಿದ್ದಳು. ಈ ಗೆಳೆತನದ ನಂತರ ದೇಶದ ಸುರಕ್ಷೆಗೆ ಸಂಬಂಧಿಸಿದ ವಿಷಯಗಳನ್ನು ಚಾಲಕ ಮಹಿಳೆಗೆ ನೀಡಿದ್ದಾನೆ ಎಂಬ ಆರೋಪಗಳಿವೆ. ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.