ಇಂದು ಅರೇಬಿಕ್ ಭಾಷಾ ದಿನ: ಕೆಲವು ಸಮಾನಾರ್ಥ ಬರುವ ಶಬ್ದಗಳ‌ ಅರ್ಥ ವ್ಯತ್ಯಾಸ ಕಲಿಯೋಣ ಬನ್ನಿ

0
525

ರೈಹಾನ್ ವಿ.ಕೆ ಸಚೇರಿಪೇಟೆ

ಉಮರ್(ರ) ಹೀಗೆಂದರು.ನೀವು ಅರಬಿ ಭಾಷೆಯನ್ನು ಕಲಿಯಿರಿ ಏಕೆಂದರೆ ಅದು ನಿಮ್ಮ ಬುದ್ಧಿಯನ್ನು ವೃದ್ಧಿಸುತ್ತದೆ. ಮತ್ತು ನಿಮಗೆ ಪೌರುಷವನ್ನು ನೀಡುತ್ತದೆ.

ಏನಿದು ಕೋಲ್ಡ್,ಸ್ವದ್ರ್,ಫುಆದ್.
ಏನಿದು ಸಿಹತ್ ಆಫಿಯತ್.
ಏನಿದು ಮುದರ್ರಿಸ್,ಮುಅಲ್ಲಿಮ್.
ಏನಿದು ಕಮಾಲ್,ತಮಾಮ್.
ಏನಿದು “ದಾರ್”, “ಬೈತ್”, “ಮಂಝಿಲ್” “ಮಸ್ಕನ್”

ಮೇಲ್ನೋಟಕ್ಕೆ ದಾರ್/ಬೈತ್/منزل/مسكنة ಇವೆಲ್ಲವೂ ಸಮಾನಾರ್ಥವನ್ನು ಸೂಚಿಸುವಂತೆ ತೋರಿದರೂ ಪ್ರತಿಯೊಂದು ಪದಕ್ಕೂ ಅದರದ್ದೇ ಆದ ವಿಶಾಲಾರ್ಥವಿದೆ. ಇದು ಅರಬಿಕ್ ಭಾಷೆಯ ವೈಶಿಷ್ಟ್ಯವಾಗಿದೆ.

ದಾರ್‌….(ತಿಲ್ಕ ದಾರುಲ್ ಆಖಿರತ್)
ಎಂದು ಕುರ್‌ಆನಿನಲ್ಲಿ ಸ್ತ್ರೀ ಲಿಂಗವಾಗಿ ಪ್ರಸ್ತಾಪಿಸಿದ ಈ ಪದಕ್ಕೆ ಇಂಗ್ಲಿಷ್ ನಲ್ಲಿ home ಎಂಬ ಅರ್ಥವಿದೆ. ಇದು ಪ್ರಾಣಿ ಪಕ್ಷಿಗಳ ವಾಸಸ್ಥಾನಗಳಿಗೂ دار(ದಾರ್) ಎನ್ನಲಾಗುತ್ತದೆ. ಮತ್ತು دار ದಾರ್ ಇವು ಒತ್ತಟ್ಟಿಗಿರುವ ಹಲವು ಮನೆಗಳಲ್ಲಿ ಒಂದು.

ಬೈತುಲ್ಲಾಹ್=بيت الله ಅಲ್ಲಾಹನ ಭವನ
ಬಾತ್ ಯಬೀತುبات يبيت.. ಎಂದರೆ ರಾತ್ರಿ ಕಾಲದಲ್ಲಿ ತಂಗುವ ಸ್ಥಳ
ಕುರ್’ಆನ್’ನಲ್ಲಿ ಇಬಾದುರ್ರಹ್ಮಾನ್ ಇವರ ವಿಶೇಷತೆ ರಾತ್ರಿಯ ವೇಳೆ ಆರಾಧನೆಯಲ್ಲಿ ತಲ್ಲೀನರಾಗಿರುವವರು ಎಂದು ಹೇಳುವಲ್ಲಿ( ವಲ್ಲದೀನ ಯಬೀತೂನ ಲಿರಬ್ಬಿಹಿಮ್ ಸುಜ್ಜದನ್ ವಕಿಯಾಮ)
بيت ಅಂದ್ರೆ ರಾತ್ರಿ ಕಾಲದಲ್ಲಿ ತಂಗುವ ಸ್ಥಳ
منزل ಯಾತ್ರೆ ಬಂದು ಇಳಿಯುವ ತಂಗುದಾಣ ಸ್ಥಳ(ತಂಗುದಾಣ
نزل=(ಇಳಿಯುವುದು.

(ಕಬರ್) ಗೋರಿಗೂ ಮಂಝಿಲ್ ಎನ್ನುತ್ತಾರೆ. ಏಕೆಂದರೆ ಇಹಲೋಕವೆಂಬ ಯಾತ್ರೆ ಮುಗಿಸಿ ಪರಲೋಕಕ್ಕೆ ಹೋಗುವ ಮುನ್ನ ನಮ್ಮನ್ನು ಇಳಿಸುವ ಸ್ಥಳ.

مسكن =سكون ಮನಶ್ಶಾಂತಿ ,ಸಿಗುವ ಸ್ಥಳ, ಶಾಂತಿ ನೆಮ್ಮದಿ
ಶಾಂತಿಯ ತಾಣ ಶಾಂತಿಯ ಗೇಹ ಎಂಬಿತ್ಯಾದಿ ಅರ್ಥಗಳಿವೆ.

كمال =ಕಮಾಲ್
ತಮಾಮ್/تمام
ಕಮಾಲ್ ಎಂಬ ಪದಕ್ಕೆ ಪರಿಪೂರ್ಣತೆ ಎಂಬ ಕನ್ನಡ ಅರ್ಥವನ್ನೂ perfection ಎಂಬ English ಅರ್ಥವನ್ನೂ ಕೊಡಬಹುದು. ಕಮಾಲ್ ಆದದ್ದು ಅಂದ್ರೆ ಸೇರ್ಪಡೆಗೆ ಎಳ್ಳಷ್ಟೂ ಅವಕಾಶವಿಲ್ಲದ್ದು. ಉದಾಹರಣೆಗೆ- ಕುರ್‌ಆನ್ ಹೇಳುತ್ತದೆ (ಅಲ್ ಯವುಮ ಅಕ್ಮಲ್ತು ಲಕುಮ್ ದೀನುಕುಮ್. ಅರ್ಥಾತ್ ಇಂದು ನಿಮಗೆ ಈ ಧರ್ಮವನ್ನು ಪರಿಪೂರ್ಣಗೊಳಿಸಲಾಯಿತು. ಇನ್ನು ಯಾವುದೇ ಹೊಸ ಸೇರ್ಪಡೆಗೆ ಅದರಲ್ಲಿ ಅವಕಾಶವಿಲ್ಲ.

ತಮಾಮ್= ಪೂರ್ಣತೆ ಎಂಬ ಕನ್ನಡ ಅರ್ಥವನ್ನೂ completion ಎಂಬ ಇಂಗ್ಲೀಷ್ ಅರ್ಥವನ್ನೂ ಕೊಡಬಹುದು. ಮೇಲಿನ ಸೂಕ್ತದಲ್ಲಿ ಮುಂದುವರಿದು (ವೂ ಅತ್ ಮೆ ಮತ್ತು ಅಲೈಕುಮ್ ನಿಅಮತೀ ) ಅರ್ಥಾತ್ ನನ್ನ ಅನುಗ್ರಹವನ್ನು ನಿಮ್ಮ ಮೇಲೆ ಪೂರ್ತಿ ಗೊಳಿಸಲಾಯಿತು ಎಂದು ಹೇಳಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅನುಗ್ರಹಗಳು ಪೂರ್ಣಗೊಂಡರೂ ಅದು ಪರಿಪೂರ್ಣತೆಗೆ ತಲುಪಬೇಕೆಂದಿಲ್ಲ. ಏಕೆಂದ್ರೆ ಅನುಗ್ರಹಗಳಲ್ಲಿ ಹೆಚ್ಚು ಕಡಿಮೆಗೆ ಅವಕಾಶವಿದೆ. ಉದಾಹರಣೆಗೆ ಕಣ್ಣು, ಕಿವಿ, ಕೈಕಾಲುಗಳು ಮತ್ತಿತರ ಶರೀರದ ಅಂಗಾಂಗಗಳೆಲ್ಲ ಅಲ್ಲಾಹನ ಅನುಗ್ರಹಗಳಾಗಿವೆ. ಆದರೆ ಇವು ಪರಿಪೂರ್ಣವಾಗಿರ ಬೇಕೆಂದಿಲ್ಲ. ಏಕೆಂದರೆ ನಮಗೆ ಕಣ್ಣಿದ್ದರೂ ಸಹ ನಮ್ಮ ನಗ್ನ ಕಣ್ಣಿಗೆ ಕಾಣದ ಅದೆಷ್ಟೋ ಸೂಕ್ಷ್ಮ ಜೀವಿಗಳು ನಮ್ಮ ಸುತ್ತ ಮುತ್ತಲೂ ಇವೆ. ಅಂತೆಯೇ ನಮ್ಮ ಕಿವಿಗಳಿಗೆ ಕೇಳದಂತಹ ಶಬ್ದಗಳೂ ಇವೆ. ಹಾಗೂ ಇನ್ನೂ ಅನೇಕ ಸೂಕ್ತಗಳು ಕಮಾಲ್ ಮತ್ತು ತಮಾಮ್’ಗೆ ಸಂಬಂಧಪಟ್ಟು ಬಂದದ್ದು ನಮಗೆ ಕಾಣಬಹು.

ಹೃದಯ
ಅಲ್ಲಾಹನು ಹೃದಯಕ್ಕೆ..ಸ್ವದರ್,ಖಲ್ಬ್ ಫುಆದ್,صدر…قلب..ಖಲ್ಬ್.. فؤاد ಫುಆದ್..ಎಂಬ ವ್ಯತ್ಯಸ್ಥ..ಮೂರು ಪದವನ್ನು ಬಳಸಿರುವ ಯುಕ್ತಿ
ಸದ್ರ್ ಎಂಬುದು ಹೃದಯದ ಪ್ರಥಮ ಭಾಗ. ಇದರ ಮೂಲಕ ಸಂದೇಹ, ಕೆಟ್ಟ ಭಾವನೆ, ಸ್ವೇಚ್ಛೆ ಮುಂತಾದುವುಗಳು ಪ್ರವೇಶ ಗೊಳ್ಳುತ್ತವೆ. ಅದೇ ಪ್ರಕಾರ ಇಸ್ಲಾಮಿನ ಬೆಳಕಿಗೂ ಅಲ್ಲಿ ಸ್ಥಾನವಿದೆ. ಯುಕ್ತಿ ಜ್ಞಾನದಿಂದ ಪಡೆಯಲಾದ ಮತ್ತು ಆಲಿಸಲಾದ ಅರಿವು ಇಲ್ಲೇ ಸಂಗ್ರಹವಾಗುತ್ತವೆ. ಕೆಲವೊಮ್ಮೆ ಸದ್ರ್ ಎಂಬುದು ಸಂಕುಚಿತಗೊಂಡರೆ ಇನ್ನು ಕೆಲವೊಮ್ಮೆ ವಿಶಾಲವಾಗುತ್ತದೆ.

ಕಲ್ಬ್ ನಲ್ಲಿ ಸತ್ಯವಿಶ್ವಾಸ, ದೇವಭಯ ಮತ್ತು ಧರ್ಮ ನಿಷ್ಠೆ, ಸ್ನೇಹ – ಸಂತೃಪ್ತಿ, ಧೃಢ ನಂಬಿಕೆ, ಭಯ ಹಾಗೂ ನಿರೀಕ್ಷೆ, ಸಹನೆ ಮತ್ತು ತೃಪ್ತಿಯ ಪ್ರಕಾಶವಿರುತ್ತದೆ. ಕಲ್ಬ್ ಎಂಬುದು ಮೂಲ ಸೆಲೆ. ಸದ್ರ್ ಎಂಬುದು ಅದರ ಶಾಖೆಯಾಗಿದೆ. ಕಲ್ಬ್‘ನಿಂದಲೇ ನಿಯ್ಯತ್ (ಉದ್ದೇಶ) ಉಗಮವಾಗಿ ಸದ್ರ್ ನೆಡೆಗೆ ಸಾಗುತ್ತದೆ.

ಫುಆದ್ ಎಂಬುದು ಹೃದಯದ ಕಣ್ಣು. ಅಂತಃದೃಷ್ಟಿ, ಅಂತಃಕರಣ ಎಂದೆಲ್ಲ ಇದನ್ನು ಕರೆಯಲಾಗುತ್ತದೆ. ಇದರ ಅನುಸಾರ ಒಬ್ಬ ವ್ಯಕ್ತಿಯ ಅಭಿಪ್ರಾಯ ರೂಪುಗೊಂಡಿರುತ್ತದೆ. ಲಹುಮ್ ಖುಲೂಬುನ್ ಲಾ ಯಫ್ಕಹೂನ ಬಿಹಾ ವಲಹುಮ್ ಅಯುನುನ್ ಲಾ ಮುಸ್ಲಿಂ ರೂಪ ಬಿಹಾ ವಲಹುಮ್ ಆಝಾನುನ್ ಲಾ ಯಸ್ಮವೂನ ಬಿಹಾ ,…

ಅವರಿಗೆ ಕಲ್ಬ್‌ಗಳಿವೆ, ಆದರೆ ಆ ಮೂಲಕ ಅವರು ಚಿಂತನೆ ನಡೆಸುವುದಿಲ್ಲ. ಅವರಿಗೆ ಕಣ್ಣುಗಳಿವೆ, ಆದರೆ ಆ ಮೂಲಕ ಅವರು ನೋಡುವುದಿಲ್ಲ. ಹಾಗೆಯೇ, ಅವರಿಗೆ ಕಿವಿಗಳಿವೆ, ಆದರೆ ಆ ಮೂಲಕ ಅವರು ಕೇಳುವುದಿಲ್ಲ.

ಪವಿತ್ರ ಕುರ್’ಆನಿನ ಈ ಆಯತ್ ನಲ್ಲಿ ತಿಳಿಸಲಾಗಿರುವ ಕಲ್ಬ್‌ನ ಬಹುವಚನ ರೂಪವಾದ ಕುಲೂಬ್, ಐನ್‌ನ ಬಹುವಚನ ರೂಪವಾದ ಆಯುನ್, ಉಝುನ್‌ ನ ಬಹುವಚನ ರೂಪವಾದ ಆಝಾನ್ ಇವೆಲ್ಲವೂ ಗೋಚರ ಅಂಗಾಂಗಗಳನ್ನು ಸೂಚಿಸುತ್ತವೆ. ಈ ಅಂಗಾಂಗಗಳು ಮಾಡುವ ಕೆಲಸಗಳನ್ನು ಇನ್ನೊಂದು ಆಯತ್’ನಲ್ಲಿ ದರ್ಶಿಸಬಹುದಾಗಿದೆ.

ಲಾ ತಕಫ್ ಮಾ ಲೈಸ ಲಕ ಬಿಹೀ ಇಲ್ಮ್….
ಇನ್ನ ಸಮ್ ಅ ವಲ್ ಬಸ್ವರ
ವಲ್ ಫುಆದ ಕುಲ್ಲು ವುಲಾಯಿಕ
ಕಾನ ಅನ್ಹು ಮಸ್ ವೂಲ

ನಿನಗೆ ಅರಿವಿಲ್ಲದ ವಿಷಯದ ಬೆನ್ನು ಹಿಡಿಯಬೇಡ. ಖಂಡಿತವಾಗಿಯೂ, ಆಲಿಸುವಿಕೆ, ನೋಡುವಿಕೆ ಮತ್ತು’ಫುಆದ್’ ಇವೆಲ್ಲವುಗಳ ಕುರಿತು ವಿಚಾರಣೆ ನಡೆಯಲಿದೆ.
ಇಲ್ಲಿ ‘ಫುಆದ್’ ಎಂದಿರುವುದು ಹೃದಯದಿಂದ ನಡೆಯುವ ಕೆಲಸವಾಗಿದೆ. ಅರ್ಥಾತ್ سمع ,بصر ಮತ್ತು فؤاد ಈ ಅಂಗಾಂಗಗಳ ಅಗೋಚರ ಕೆಲಸಗಳಾಗಿವೆ.

ಮುಅಲ್ಲಿಮ್

ಪ್ರವಾದಿ(ಸ) ಕೇವಲ ಬೋಧಕರಾಗಿರಲಿಲ್ಲ. ಅವರು “ಮುಅಲ್ಲಿಮ್” ಆಗಿದ್ದರೆಂದು ಪವಿತ್ರ ಕುರ್’ಆನ್ ಹೇಳುತ್ತದೆ. “ಮುಅಲ್ಲಿಮ್” ಎಂಬ ಪದವು ‘ಮುದರ್ರಿಸ್’ (ಬೋಧಕ) ಎಂಬ ಪದಕ್ಕಿಂತಲೂ ವಿಶಾಲವಾದ ಅರ್ಥವನ್ನು ಹೊಂದಿದೆ. ಮುಅಲ್ಲಿಮ್ ತಾನು ಕಲಿಸುವ ಜ್ಞಾನದ ಆಧಾರದಲ್ಲಿ ಕಟ್ಟಿ ಬೆಳೆಸಲಾದ ಸಮೂಹವನ್ನು ಪ್ರತಿನಿಧಿಸುತ್ತಾನೆ. ಪ್ರವಾದಿಯವರು(ಸ) ಗ್ರಂಥ ಮತ್ತು ಯುಕ್ತಿಯ ಜ್ಞಾನವನ್ನು ಬೋಧಿಸುವವರು ಮಾತ್ರ ಆಗಿರಲಿಲ್ಲ. ಆ ಜ್ಞಾನದ ಆಧಾರದಲ್ಲಿ ಸಮುಹವೊಂದನ್ನು ಕಟ್ಟಿ ಬೆಳೆಸಿದವರಾಗಿದ್ದಾರೆ.

ಅವರು (ಆ ಸಂದೇಶವಾಹಕರು). ಅವರಿಗೆ ಆತನ ವಚನಗಳನ್ನು ಓದಿ ಕೇಳಿಸುತ್ತಾರೆ. ಹಾಗೂ ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥವನ್ನೂ ಯುಕ್ತಿಯನ್ನೂ ಕಲಿಸಿಕೊಡುತ್ತಾರೆ. (ಅಲ್ ಜುಮುಅ: 2) ಎಂದು ಕುರ್‌ಆನ್‌ನಲ್ಲಿ ಅಭಿಸಂಬೋಧಿಸಲಾಗಿದೆ.

ಆಲ್ ಆಫಿಯತ್ತ್ ವಸ್ಸಿಹ್ಹತ್‌
ಅಸ್ಸಿಹ್ಹ
ದೈಹಿಕ ಆರೋಗ್ಯ.
ಅಲ್ ಆಫಿಯತ್ತ್

ದೈಹಿಕ ಆರೋಗ್ಯ ಮತ್ತು ಮಾನಸಿಕ ಅರೋಗ್ಯ ಹಾಗೂ ಎಲ್ಲ ಹಾನಿಕಾರಕ ವಿಪತ್ತುಗಳಿಂದ ಸುರಕ್ಷತೆ ಅರ್ಥಾತ್‌ ಟೆನ್ಶನ್ ಸ್ಟ್ರೆಸ್ಸ್ ಹೀಗೆ ಮಾನಸಿಕವಾಗಿ ಅನುಭವಿಸುವ ಅನಾರೋಗ್ಯದಿಂದ ಇಹಲೋಕ ಜೀವನದಲ್ಲಿ ಎದುರಾಗುವ ದುರಂತ, ಯಾತನೆ, ಸಂಕಷ್ಟಗಳಾಗಿರಬಹುದು, ಈ ರೀತಿ ಆಫಿಯತ್ ಎಂಬುದು ಸಿಹ್ಹತ್’ಗಿಂತಲೂ ವಿಶಾಲವಾದ ಅರ್ಥವನ್ನು ಒಳಗೊಂಡಿದೆ.