ಸನ್ಮಾರ್ಗ ವಾರ್ತೆ
ಮಂಗಳೂರು: ಬಡವರಿಗೆ, ನಿರ್ಗತಿಕರಿಗೆ ಹೊಸ ಮನೆ ನಿರ್ಮಿಸಿ ಕೊಡುವ ಎಚ್‌ಎಫ್ ಪ್ರಾಜೆಕ್ಟ್ ಆಶಿಯಾನದ ಅಡಿಯಲ್ಲಿ 26ನೇ ಮನೆಯನ್ನು ಸಜೀಪ ಸಮೀಪದ ಬೊಲಿ ಪದವು ಎಂಬಲ್ಲಿ ವಿಧವೆಯೊಬ್ಬರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಏಹ್ಸಾನ್(EHSAAN) ಮಸೀದಿಯ ಇಮಾಮ್ ಮೌಲಾನಾ ಅಲ್ತಾಫ್ ಹೊಸಮನೆಯ ಕೈ ಕೀಲಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಮತ್ತೋರ್ವ ಮುಖ್ಯ ಅತಿಥಿ ಬೊಲಿಪದವು ಜುಮಾ ಮಸೀದಿಯ ಅಧ್ಯಕ್ಷ ರಫೀಕ್, ಬೆಸ್ಟ್ ಪ್ಲೈವುಡ್ ಮಾಲಕ ಅಶ್ರಫ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಎಚ್ಎಫ್ ಇಂಡಿಯಾ ಅಧ್ಯಕ್ಷ ನಾಜಿಮ್ ಏಕೆ ಸಂಸ್ಥೆಯ ಕುರಿತು ಮಾತನಾಡಿ ನೆಲ್ಯಾಡಿ ಸಮೀಪ ಆಶಿಯಾನದ 27 ಮತ್ತು 28ನೇ ಮನೆಯ ಕಾಮಗಾರಿ ಪ್ರಗತಿಯಲ್ಲಿದೆ ಅತಿ ಶೀಘ್ರದಲ್ಲಿ ಫಲಾನುಭವಿಗೆ ಮನೆಯನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಆದಿಲ್ ಪರ್ವೇಜ್ ಕಿರಾತ್ ಪಠಿಸಿದರು. ಸಜೀದ್ ಏಕೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿ ತಸ್ಲೀಮ್, ಸಾಜಿದ್ ಸೌದಿ, ಸಿರಾಜ್ ಸಜಿಪ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.













