ಗೌಡ ಪ್ರಶಸ್ತಿ| ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್‌‌ ಆಯ್ಕೆ: ಡಿ.30ರಂದು ಪ್ರಶಸ್ತಿ ಪ್ರದಾನ

0
341

ಸನ್ಮಾರ್ಗ ವಾರ್ತೆ

ಕಲಬುರಗಿ: ಸುಭಾಷ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಪ್ರತಿವರ್ಷ ಕೊಡಮಾಡುವ ರಾಜ್ಯ ಮಟ್ಟದ ‘ಗೌಡ ಪ್ರಶಸ್ತಿ’ಗೆ ಈ ಬಾರಿ ಬೀದರನ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಅಬ್ದುಲ್ ಖದೀರ್ ಆಯ್ಕೆಯಾಗಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಅವರು, ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಸಮಾರಂಭವು ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಡಿಸೆಂಬರ್ 30ರಂದು ಜರುಗಲಿದ್ದು, ಪ್ರಶಸ್ತಿಯು ಬಂಗಾರದ ಪದಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ‌.

ಇದೇ ಸಂದರ್ಭದಲ್ಲಿ ಅಶೋಕ್ ಗೋಗಿ, ಚನ್ನಾರೆಡ್ಡಿ ಪಾಟೀಲ್, ಬಾಬುರಾವ್ ಯಡ್ರಾಮಿ, ಪ್ರೊ. ಎಸ್.ಎಲ್. ಪಾಟೀಲ್, ಸೈಯದ್ ಅಕ್ಬರ್ ಹುಸೇನಿ, ಡಾ. ಸುನೀಲ್‍ ಕುಮಾರ್ ವಂಟಿ, ಶಂಕರ್ ಆರ್. ಪಾಟೀಲ್, ಶ್ರೀಮತಿ ಮಂಗಲಾ ಕಪರೆ, ಡಾ. ಗೋದಾವರಿ ಬಂಗೆ, ಶಿವಕುಮಾರ್ ಬೆಳಕೇರಿ ಅವರಿಗೆ ‘ಗೌಡ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.