ಹಜ್ಜ್ ಯಾತ್ರಿಕರಿಗೆ ಕೊರೊನಾ ವ್ಯಾಕ್ಸಿನ್ ಕಡ್ಡಾಯ

0
274

ಸನ್ಮಾರ್ಗ ವಾರ್ತೆ

ಜಿದ್ದಾ:  ಈ ಬಾರಿ ಹಜ್ ನಿರ್ವಹಿಸಲು ಬಯಸುವವರು ಕೊರೊನಾ ಪ್ರತಿರೋಧ ವ್ಯಾಕ್ಸಿನ್ ಅನ್ನು ಪಡೆದುಕೊಂಡಿರಬೇಕಾದುದು ಕಡ್ಡಾಯ ಎಂದು ಸೌದಿ ಹಜ್ ಸಚಿವಾಲಯ ತಿಳಿಸಿದೆ. ಹಜ್ ನಿರ್ವಹಣೆಯ ನಿಬಂಧನೆಗಳಲ್ಲಿ ವ್ಯಾಕ್ಸಿನ್ ವಿಷಯವನ್ನು ಸೇರಿಸಲಾಗಿದೆ

ಈ ವಿವರವನ್ನು ಟ್ವಿಟರ್ ಮೂಲಕ ಹಜ್ ಸಚಿವಾಲಯ ತಿಳಿಸಿದೆ. ಯಾರು ಹಜ್ ನಿರ್ವಹಿಸಬಯಸುತ್ತಾರೋ ಅವರು ಗಂಭೀರ ಮತ್ತು ಶಾಶ್ವತ ರೋಗಿಗಳು ಆಗಿರಬಾರದು ಮತ್ತು ಯಾವುದಾದರೂ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವವರಾಗಿರಬಾರದು ಎಂದು ಕೂಡ ಸಚಿವಾಲಯ ತಿಳಿಸಿದೆ. ಜೊತೆಗೆ ಮೆನಿ ಬೈಟಿಸ್ ವ್ಯಾಕ್ಸಿನ್ ಮತ್ತು ಸೀಸನಲ್ ಇನ್ಫ್ಲುವನ್ಸ್ ವ್ಯಾಕ್ಸಿನ್ ಕೂಡ ಪಡೆದಿರಬೇಕು ಎಂದು ತಿಳಿಸಲಾಗಿದೆ.