ಬಡವರಿಗೆ 41 ಮನೆ ಕಟ್ಟಿಸಿ ಕೊಟ್ಟ ದಾದಿ ನರ್ಗೀಸ್ ಬೇಗಮ್ ಏನು ಹೇಳುತ್ತಾರೆ -ವೀಡಿಯೊ

0
1859

ವಯನಾಡ್: ವಯನಾಡಿನ ನರ್ಗಿಸ್ ವೃತ್ತಿಯಲ್ಲಿ ನರ್ಸ್ ಆಗಿದ್ದಾರೆ. ಒಬ್ಬ ಮಹಿಳೆ ಫೇಸ್‍ಬುಕ್ ಮೂಲಕ ಬಹುದೊಡ್ಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಅವರ ನೇತೃತ್ವದಲ್ಲಿ 41ನೆ ಮನೆಯ ಕೆಲಸ ನಡೆಯುತ್ತಿದೆ. ಇದೇವೇಳೆ ಬಹಳಷ್ಟು ರೋಗಿಗಳಿಗೆ ನೆರವು ನೀಡುತ್ತಿದ್ದಾರೆ. ಫೇಸ್‍ಬುಕ್ ಪ್ರೊಫೈಲ್ ಮೂಲಕ ಆರು ವರ್ಷಗಳಿಂದ ಫಾಲೋವರ್ಸ್‍ಗಳ ಸಹಾಯದಲ್ಲಿ ವಿವಿಧ ಸೇವೆಯಲ್ಲಿ ಅವರು ವ್ಯಸ್ತರಾಗಿದ್ದಾರೆ. ಕಾಸರಗೋಡಿನಿಂದ ತಿರುವನಂತಪುರಂವರೆಗೆ ಅವರಿಂದ ಸಹಾಯ ಪಡೆದವರಿದ್ದಾರೆ.

ಮುಖ್ಯವಾಗಿ ಬಡ ಹೆಣ್ಣುಮಕ್ಕಳ ಮದುವೆಗೆ ಅವರು ಧನ ಸಹಾಯ ನೀಡುತ್ತಾರೆ. ಬೆನ್ನು ಹುರಿಗೆ ಗಾಯವಾಗಿ ಮಲಗಿದ್ದಲ್ಲಾದ ರೋಗಿಗಳನ್ನು ಕರೆದು ಕೊಂಡು ಹೋಗಿ ಆಸ್ಪತ್ರೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮದುವೆಯಾಗಿ ಮಹಿಳೆಯರನ್ನು ತೊರೆದು ಹೋದವರಿಗೆ, ಅವರ ಮಕ್ಕಳಿಗೆ, ಅವರ ಮಕ್ಕಳ ಶಿಕ್ಷಣವನ್ನು ಅವರು ಮಾಡುತ್ತಿದ್ದಾರೆ.

ನರ್ಸ್‍ ಆಗಿ ದುಡಿದ ಹಣವನ್ನು ಅವರು ಈ ಸೇವೆಗೆ ಬಳಸುತ್ತಿದ್ದಾರೆ. ವಿದೇಶದಲ್ಲಿ ದುಡಿಯುವವರು ಫೇಸ್‍ಬುಕ್ ಮೂಲಕ ಅವರಿಗೆ ಸಹಾಯ ಮಾಡುತ್ತಿದ್ದಾರೆ. ದಾನಿಗಳನ್ನು ಕೊಡುವ ಹಣವನ್ನು ಅರ್ಹರಿಗೆ ತಲುಪಿಸುತ್ತಿದ್ದಾರೆ. ಅಡೋರ ಎನ್‍ಜಿಒದ ಅಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಮಾತ್ರವಲ್ಲ ಹಲವು ಮಹಿಳೆಯರಿಗೆ ಬ್ಯಾಗ್ ನಿರ್ಮಾಣ ಹೂದಾನಿ ನಿರ್ಮಾಣ ಇತ್ಯಾದಿ ಕರಕುಶಲ ಕೆಲಸಗಳನ್ನು ಕೊಡುತ್ತಿದ್ದಾರೆ. ಒಟ್ಟಿನಲ್ಲಿ ವಿವಿಧ ಸೇವೆಯಲ್ಲಿ ನರ್‍ಗೀಸ್ ಬೇಗಂ ತೊಡಗಿಸಿಕೊಂಡಿದ್ದಾರೆ. ಸೇವೆ ಎನ್ನುವುದಕ್ಕೆ ಇನ್ನೊಂದು ಹೆಸರು ನರ್ಗೀಸ್ ಬೇಗಂ, ಅವರ ಸಂದರ್ಶನದ ಮಲೆಯಾಳಂ ಭಾಷೆಯಲ್ಲಿದೆ. ಮಳೆಯಾಳಂ ಭಾಷೆ ಬಲ್ಲವರು ಮೀಡಿಯ ವನ್ ಪ್ರಸಾರ ಮಾಡಿದ ಅವರೊಂದಿಗಿನ ಸಂದರ್ಶನವನ್ನು ನೇರವಾಗಿ ಆಲಿಸಿ ಅವರ ಸೇವಾ ವೈವಿಧ್ಯತೆಯನ್ನು ತಿಳಿದು ಕೊಳ್ಳಬಹುದು