ಮುಂಬೈ,ಮಾ.9: ಮಾಜಿ ಮೀಡಿಯ ಎಕ್ಸಿಕ್ಯೂಟಿವ್ ಪೀಟರ್ ಮುಖರ್ಜಿಯ ಜಾಮೀನು ಅರ್ಜಿಯನ್ನು ಸಿಬಿಐ ಶುಕ್ರವಾರ ವಿರೋಧಿಸಿದೆ. ಪೀಟರ್ ತನ್ನ ಪತ್ನಿ ಇಂದ್ರಾಣಿ ಮುಖರ್ಜಿಗೆ ಮಾಜಿ ಪತಿಯಲ್ಲಿ ಜನಿಸಿದ ಮಗಳು ಶೀನಾ ಬೊರಾಳ ಸೈಲೆಂಟ್ ಕಿಲ್ಲರ್ (ಮೂಕ ಕೊಲೆಗಾರ) ಆಗಿದ್ದಾರೆ ಎಂದು ಶುಕ್ರವಾರ ವಿಶೇಷ ಕೋರ್ಟಿಗೆ ತಿಳಿಸಿದೆ. 2012ರಲ್ಲಿ ಶೀನಾ ಬೊರ ಹತ್ಯೆ ನಡೆದಿತ್ತು.
ಪೀಟರ್ ಮುಖರ್ಜಿಯನ್ನು ಶೀನಾ ಬೊರ ಪ್ರಕರಣದಲ್ಲಿ 2015ರಲ್ಲಿ ಬಂಧಿಸಲಾಗಿತ್ತು. ಕಳೆದ ವರ್ಷ ಅವರ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ಜಡ್ಜ್ ಜೆಸಿ ಜಗದಾಳೆ ತಿರಸ್ಕರಿಸಿದ್ದರು. ಅವರು ಮೂರನೆಯ ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಜಾಮೀನು ಅರ್ಜಿಯನ್ನು ವಿರೋಧಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಭಾರತ್ ಬಾದಾಮಿ ಸಿಬಿಐ ಶೀನ ಕೊಲೆ ಪ್ರಕರಣದಲ್ಲಿ ಪೀಟರ್ ಭಾಗಿಯಾಗಿರುವುದನ್ನು ಸಿಬಿಐ ಸಾಕ್ಷ್ಯಾಧಾರಗಳ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಕೋರ್ಟಿನಲ್ಲಿ ವಾದಿಸಿದರು.
ಪೀಟರ್ ಶೀನಾ ನಾಪತ್ತೆಯಾದಾಗ ಹುಡುಕಲು ಯಾವುದೇ ಪ್ರಯತ್ನ ಮಾಡಿಲ್ಲ. ಶೀನಾ ತನ್ ಪುತ್ರ ರಾಹುಲ್ ಮುಖರ್ಜಿಯ ಪ್ರೇಯಸಿಯಾಗಿದ್ದಾಳೆ ಎಂದು ಅವರಿಗೆ ತಿಳಿದಿದ್ದರೂ” ಎಂದು ಬಾದಾಮಿ ಕೋರ್ಟಿನಲ್ಲಿ ಹೇಳಿದರು. ಪೀಟರ್ಗೆ ಎಲ್ಲ ಗೊತ್ತಿತ್ತು. ಅವರು ಸ್ಥಬ್ಧವಾಗಿದ್ದರು. ರಾಹುಲ್ ಶೀನಾಳ ಬಗ್ಗೆ ಹೇಳಿದಾಗ ಅವರು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಪೀಟರ್ ಶೀನಾಳ ಸೈಲಂಟ್ ಕಿಲ್ಲರ್ ಆಗಿದ್ದಾಳೆ ಎಂದು ಸಿಬಿಐ ವಕೀಲರು ಹೇಳಿದರು. ಪೀಟರ್ ಮುಖರ್ಜಿಗೆ ಜಾಮೀನು ನೀಡಿದರೆ ಅವರು ಸಾಕ್ಷ್ಯ(ರಾಹುಲ್) ನಾಶಕ್ಕೆ ಪ್ರಯತ್ನಿಸಬಹುದು ಎಂದು ಬಾದಾಮಿ ಹೇಳಿದರು.












