ಬ್ರಿಟೀಷ್ ಐಎಸ್‌ಐಎಸ್ ವಧು ಶಮೀಮಾಳ ನವಜಾತ ಗಂಡು ಮಗು ನಿಧನ

0
1083

ಲಂಡನ್: ಸಿರಿಯದ ಡೆಮಕ್ರಾಟ್ ಪೋರ್ಸ್ ವಕ್ತಾರ ಇಂಗ್ಲೆಂಡಿನಿಂದ ತಪ್ಪಿಸಿಕೊಂಡು ಹೋಗಿ ಐಎಸ್‌ಐಎಸ್ ಸೇರಿದ್ದ ಶಾಲಾ ಬಾಲಕಿ ಶಮೀಮಾ ಬೇಗಮಳ ನವಜಾತ ಗಂಡು ಮಗು ಸತ್ತಿದೆ ಎಂದು ದೃಢಪಡಿಸಿದ್ದಾರೆ. ಶಮೀಮಾ ಬೇಗಂ ಸಿರಿಯದ ನಿರಾಶ್ರಿತ ಶಿಬಿರದಲ್ಲಿದ್ದಾಳೆ ಬ್ರಿಟನ್ ಸರಕಾರ ಇತ್ತೀಚೆಗೆ ಅವಳ ನಾಗರಿಕತೆಯನ್ನು ರದ್ದು ಪಡಿಸಿದೆ.

ಜರ್ರಾ ಎಂಬ ಹೆಸರಿನ ಎರಡು ವಾರಗಳ ಗಂಡು ಮಗು ನ್ಯೂಮೇನಿಯದಿಂದ ಮೃತಪಟ್ಟಿದೆ ಎಂದು ವೈದ್ಯಕೀಯ ದಾಖಲಾತಿಯಲ್ಲಿ ನಮೂದಿಸಲಾಗಿದೆ. ಶಮೀಮಾಳಿಗೆ ಸದ್ಯ ಹತ್ತೊಂಬತ್ತು ವರ್ಷ ವಯಸ್ಸಾಗಿದ್ದು ತನ್ನ ಹದಿನೈದನೆಯ ವಯಸ್ಸಿನಲ್ಲಿ ಸಿರಿಯಕ್ಕೆ ತೆರಳಿ ಐಎಸ್‌ಐಎಸ್ ಸೇರಿದ್ದಳು. ಸಿರಿಯನ್ ಡೆಮಕ್ರಾಟಿಕ್ ಪೋರ್ಸ್ ನಡೆಸುತ್ತಿರುವ ನಿರಾಶ್ರಿತರ ಶಿಬಿರದಲ್ಲಿದ್ದಾಳೆ.

ಇದೇ ವೇಳೆ ಬ್ರಿಟನ್ ಸರಕಾರ ಶಮೀಮಾ ಮಗು ಕಳೆದುಕೊಂಡ ಬಗ್ಗೆ ವಿಷಾದ ಸೂಚಿಸಿದೆ. “ಯಾವುದೇ ಮಗುವಿನ ಸಾವು ಆಯಾ ಕುಟುಂಬಕ್ಕೆ ದುಃಖ ಮತ್ತು ತುಂಬಲಾರದ ನಷ್ಟವನ್ನು ತಂದು ಕೊಡುತ್ತದೆ” ಎಂದು ಇಂಗ್ಲೆಂಡ್ ಸರಕಾರದ ವಕ್ತಾರರು ಹೇಳಿದರು.
ಕುರ್ದಿಶ್ ರೆಡ್ ಕ್ರೆಸೆಂಟ್‍ನ ವೈದ್ಯಕೀಯ ಕಾರ್ಯಕರ್ತರು ಮಗು ಉಸಿರಾಟ ತೊಂದರೆಯಿಂದ ಬಳಲುತ್ತಿತ್ತು ಎಂದು ಹೇಳಿದ್ದಾರೆ.

ಮಗುವನ್ನು ತಾಯಿಯ ಜೊತೆ ಗುರುವಾರ ವೈದ್ಯರ ಬಳಿಗೆ ಕರೆದುಕೊಂಡು ಹೋಗಲಾಯಿತು. ನಂತರ ವೈದ್ಯರ ಶಿಫಾರಿಸ್ಸಿನಂತೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಗುರುವಾರ ಕೊನೆಯುಸಿರೆಳೆದಿದೆ ಮತ್ತು ಸಮೀನಾ ಬೇಗಂ ನಿರಾಶ್ರಿತರ ಶಿಬಿರಕ್ಕೆ ಮರಳಿದ್ದು ಶುಕ್ರವಾರ ಮಗುವಿನ ಮೃತದೇಹವನ್ನು ದಫನ ಮಾಡಲಾಯಿತು ಎಂದು ರೆಡ್ ಕ್ರೆಸೆಂಟ್ ತಿಳಿಸಿದೆ.