ಮಂಗಳೂರು, ಚೆಂಬರಿಕೆ ಖಾಝಿ ಸಾವು: ಪುನಃ ಸಿಬಿಐ ತನಿಖೆ ನಡೆಸಬೇಕು- ಜಿಫ್ರಿ ಮುತ್ತುಕೋಯ ತಂಙಳ್

0
818

ಕಲ್ಲಿಕೋಟೆ,ಮಾ.11: ಚೆಂಬರಿಕೆ ಖಾಝಿ ಸಿಎಂ ಅಬ್ದುಲ್ಲ ಮೌಲವಿಯ ಸಾವಿಗೆ ಸಂಬಂಧಿಸಿ ಪುನಃ ಸಿಬಿಐ ವಿಚಾರಣೆ ನಡೆಸಬೇಕೆಂದು ಸಮಸ್ತ ಕೇರಳ ಜಮ್‍ಇಯ್ಯತ್ತುಲ್ ಉಲಮಾ ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಆಗ್ರಹಿಸಿದ್ದಾರೆ. ಸಮಸ್ತ ಕೇರಳ ಜಮ್‌ಇಯ್ಯತ್ತುಲ್ ಉಲಮಾ ಉಪಾಧ್ಯಕ್ಷ ಮತ್ತು ವಿದ್ವಾಂಸರಾಗಿದ್ದ ಅಬ್ದುಲ್ಲ ಮೌಲವಿಯ ಹಂತಕರನ್ನು ಪತ್ತೆಹಚ್ಚಬೇಕೆಂದು ಸಮಸ್ತ ನಾಯಕರ ನೇತೃತ್ವದಲ್ಲಿ ಮುದಲಕ್ಕುಳಂ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

ಖಾಝಿಯವರು ಆತ್ಮಹತ್ಯೆ ಮಾಡಿಕೊಂಡಿಲ್ಲ , ಅದೊಂದು ಕೊಲೆಯಾಗಿದೆ ಎಂಬ ಬಲವಾದ ಶಂಕೆ ಇದೆ. ಅವರ ಸಾವು ಆತ್ಮಹತ್ಯೆಯೆಂದು ಬಿಂಬಿಸುವುದರಲ್ಲಿ ಸಂಶಯವಿದೆ. ಆತ್ಮಹತ್ಯೆಗೆ ಪ್ರೇರೇಪಿಸುವ ಯಾವ ವಿಷಯವೂ ಅವರಿಗಿರಲಿಲ್ಲ. ಸ್ಥಳೀಯ ಪೊಲೀಸರಿಂದ ಹಿಡಿದು ಸಿಬಿಐವರಗೆ ತನಿಖೆ ನಡೆದರೂ ಒಂಬತ್ತು ವರ್ಷವಾಗಿಯೂ ಈ ವಿಷಯದಲ್ಲಿ ನ್ಯಾಯ ಲಭಿಸಿಲ್ಲ . ಸತ್ಯ ಅನಾವರಣಗೊಳ್ಳುವಂತಾಗಲು ಸಮಸ್ತ ಎಲ್ಲ ರೀತಿಯ ಪ್ರಯತ್ನ ನಡೆಸಲಿದೆ. ಖಾಝಿಯವರ ಸಾವಿನ ಸಮಗ್ರ ತನಿಖೆ ನಡೆಸಬೇಕೆಂದು ಸಮಸ್ತ ಕೇರಳ ಜಮ್‍ಇಯ್ಯತ್ತುಲ್ ಉಲಮಾ ಆಗ್ರಹಿಸುತ್ತಿದ್ದು ಈನಿಲುವಿನಿಂದ ಈವರಗೆ ಹಿಂದೆ ಸರಿದಿಲ್ಲ ಎಂದು ಅವರು ಹೇಳಿದರು.