ಸನ್ಮಾರ್ಗ ವಾರ್ತೆ
ಧಾರವಾಡ: ಖಿದ್ಮಾ ಫೌಂಡೇಶನ್ ಕರ್ನಾಟಕ ವತಿಯಿಂದ ನೀಡಲಾಗುವ ಖಿದ್ಮಾ ಕಾವ್ಯ ಪ್ರಶಸ್ತಿಗೆ ತನ್ಸೀರಾ ಆತೂರು ಆಯ್ಕೆಯಾಗಿದ್ದಾರೆ. ಇವರು ಉಪ್ಪಿನಂಗಡಿಯ ಇಳಂತಿಲದಲ್ಲಿರುವ ಜ್ಞಾನ ಭಾರತಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಧಾರವಾಡದ ರಂಗಾಯಣದಲ್ಲಿ ಮಾರ್ಚ್ 5ರ ಭಾನುವಾರದಂದು ನಡೆಯಲಿರುವ ಖಿದ್ಮಾ ಕವಿ ಕಾವ್ಯ ಸಂಗಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ತನ್ಸೀರಾ ಆತೂರುರವರನ್ನು ಗೌರವಿಸಲಾಗುವುದು ಎಂದು ಆಯೋಜಕರು, ಖಿದ್ಮಾ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ತಿಳಿಸಿದ್ದಾರೆ.
ತನ್ಸೀರಾರವರ ಬರವಣಿಗೆಗಳು ಮಂಗಳ, ಉರುಮಾಲ್, ಬ್ಯಾರಿ ವಾರ್ತೆ ಹಾಗೂ ಬೆಲ್ಕಿರಿ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಸಾಹಿತ್ಯ ಚಿಗುರು ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಸಾಮಾಜಿಕ ಜಾಲತಾಣದ ಬರವಣಿಗೆಗಳಲ್ಲಿ ಸಕ್ರಿಯರು.












