ಸನ್ಮಾರ್ಗ ವಾರ್ತೆ
ಮಂಗಳೂರು ನಗರದ ಹೊರವಲಯದ ವಾಮಂಜೂರಿನ ತಿರುವೈಲ್ ವಾರ್ಡ್ ನಲ್ಲಿ ಕಾರ್ಯಾಚರಿಸುತ್ತಿದ್ದ ವೈಟ್ ಗ್ರೋ ಅಗ್ರಿ ಎನ್ಎಲ್ ಪಿ ಅಣಬೆ ತಯಾರಿಕಾ ಘಟಕವನ್ನು ಮುಚ್ಚಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಆದೇಶಿಸಿದ್ದಾರೆ.
ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರವಿಕುಮಾರ್ ಈ ಆದೇಶವನ್ನು ಹೊರಡಿಸಿದ್ದಾರೆ.
ಈ ಘಟಕದ ಕುರಿತಾಗಿ ಈಗಾಗಲೇ ಮಾಹಿತಿ ವರದಿಗಳನ್ನು ಸಂಗ್ರಹಿಸಲಾಗಿದ್ದು ಇದರ ಹಿನ್ನೆಲೆಯಲ್ಲಿ ಕಾನೂನು ನೀತಿ ನಿಯಮಗಳ ಅಡಿಯಲ್ಲಿ ಜನರು ಮುಚ್ಚುವಂತೆ ಆಗ್ರಹಿಸುತ್ತಿದ್ದ ಹಣಬೆ ತಯಾರಿಕಾ ಘಟಕವನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ವಾಮಂಜೂರಿನ ತಿರುವೈಲ್ ವಾರ್ಡ್ ನಲ್ಲಿ ಕಾರ್ಯಾಚರಿಸುತ್ತಿರುವ ವೈಟ್ ಗ್ರೋ ಅಗ್ರಿ ಎನ್ಎಲ್ ಪಿ ಅಣಬೆ ತಯಾರಿಕಾ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ಕೆಲವು ದಿನಗಳಿಮದ ಗ್ರಾಮಸ್ಥರು ಅನಿರ್ದಿಷ್ಠಾವದಿ ಮುಷ್ಕರ ನಡೆಸುತ್ತಿದ್ದರು.












