ತಿರುವನಂತಪುರಂನಲ್ಲಿ ಕಡಲಿನ ಆರ್ಭಟ: 500ಕ್ಕೂ ಹೆಚ್ಚು ಮನೆಗಳು ಅಪಾಯದ ಭೀತಿಯಲ್ಲಿ

0
986

ವಲಿಯತುರ,ಮಾ.20: ತಿರುವನಂತಪುರಂ ನಗರದ ಸಮುದ್ರ ತೀರದಲ್ಲಿ ಸಮುದ್ರದ ಆರ್ಭಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು ಐನೂರಕ್ಕೂ ಹೆಚ್ಚು ಮನೆಗಳು ಅಪಾಯ ಭೀತಿಯಲ್ಲಿದೆ ಎಂದು ವರದಿಯಾಗಿದೆ. ಪೂಂದುರಂ ನಿಂದ ವೆಳಿ ಪೊಯಿಕ್ಕರ ಎಂಬಲ್ಲಿವರಗೆ ಸಮುದ್ರ ತಟದಲ್ಲಿ ಸೋಮವಾರ ರಾತ್ರೆಯಿಂದ ಸಮುದ್ರ ಅಬ್ಬರಿಸುತ್ತಾ ದಡವನ್ನು ಆಕ್ರಮಿಸುತ್ತಾ ಮುಂದೆ ಬರುತ್ತಿದೆ.

ಕಳೆದ ಬಾರಿ ಸಮುದ್ರದ ಅಬ್ಬರಕ್ಕೆ ಮನೆಗಳು ಕುಸಿದಿದ್ದ ಅದೇ ವಲಿಯತುರ,ಕುಯಿವಿಳಾಗಂ, ವಲಿಯತೋಪು, ಕಣ್ಣಾತುರ, ಬೀಮಾ ಪಳ್ಳಿಗಳಲ್ಲಿ ಈ ಸಲ ಹೆಚ್ಚು ಅಪಾಯದ ಬೆದರಿಕೆ ಸೃಷ್ಟಿಯಾಗಿದೆ. ಕಳೆದ ವರ್ಷವೂ ಈ ಭಾಗದಲ್ಲಿ ಐನೂರಕ್ಕೂ ಹೆಚ್ಚು ಮನೆಗಳು ಕುಸಿದಿದ್ದವು.