ಎಷ್ಟು ಕಿರುಕುಳ ನೀಡುವಿರೋ ಅಷ್ಟೇ ಬಲಿಷ್ಠವಾಗಿ ಹೋರಾಡುತ್ತೇವೆ- ಮೋದಿ ಬ್ಲಾಗ್‍ಗೆ ಪ್ರಿಯಾಂಕಾ ಗಾಂಧಿ ಉತ್ತರ, ಎಲ್ಲೆಡೆ ಮೆಚ್ಚುಗೆ

0
1046

ವಾರಣಾಸಿ, ಮಾ.20: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ರಾಜಕೀಯ ಪಕ್ಷಗಳ ನಡುವೆ ಟ್ವೀಟರ್ ನಲ್ಲಿ ಆರೋಪ ಪ್ರತ್ಯಾರೋಪಗಳು ಕಾವೇರುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿಕೊಂಡಿರುವ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ಬ್ಲಾಗ್‍ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಧಾನಿ ಜನರನ್ನು ಮೂರ್ಖರೆಂದು ತಿಳಿದಿದ್ದಾರೆ. ಬಿಜೆಪಿ ಆಡಳಿತದಲ್ಲಿ ಸಾಂವಿಧಾನಿಕ ಸಂಸ್ಥೆಗಳಿಗೆ ಅಪಾಯವಿದೆ. ಬಿಜೆಪಿ ಇಂಥ ಎಲ್ಲ ಸಂಸ್ಥೆಗಳಿಗೆ ದಾಳಿ ಮಾಡಿದೆ. ನಾವು ಪ್ರಧಾನಿಗೆ ಹೆದರುವುದಿಲ್ಲ. ಅವರು ಎಷ್ಟೇ ಕಿರುಕುಳ ನೀಡಲಿ ಅಷ್ಟೇ ಬಲಿಷ್ಠವಾಗಿ ನಾವು ಹೋರಾಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಕುಟುಂಬ ಆಡಳಿತದಿಂದ ಅತಿಹೆಚ್ಚು ಹಾನಿ ಈ ಸಂಸ್ಥೆಗಳಿಗಾಗಿವೆ ಎಂದು ಪ್ರಧಾನಿ ತನ್ನ ಬ್ಲಾಗ್‍ನಲ್ಲಿ ಹೇಳಿದ್ದರು. ಮಾಧ್ಯಮಗಳಿಂದ, ಪಾರ್ಲಿಮೆಂಟಿನ ವರೆಗೆ, ಸೈನಿಕರಿಂದ ಮುಕ್ತ ಮಾತಿನವರೆಗೆ, ಸಂವಿಧಾನದಿಂದ ಕೋರ್ಟಿನವರೆಗೆ ಕುಟುಂಬ ಆಡಳಿತ ಯಾವುದನ್ನೂ ಮುಟ್ಟದೆ ಬಿಟ್ಟಿಲ್ಲ ಎಂದು ಮೋದಿ ಹೇಳಿದ್ದರು.