ಈ ಸಲದ ಹೋಲಿಯನ್ನು ದೇಶಕ್ಕೆ ಅರ್ಪಿಸಿದ ಪಾಕ್ ಹಿಂದೂ ಕೌನ್ಸಿಲ್

0
1171

ಕರಾಚಿ,ಮಾ.20: ಪಾಕಿಸ್ತಾನದ ಹಿಂದೂ ಕೌನ್ಸಿಲ್ ಈ ಸಲದ ಹೋಲಿ ಹಬ್ಬವನ್ನು ದೇಶಕ್ಕೆ ಅರ್ಪಿಸುವುದಾಗಿ ಘೋಷಿಸಿದೆ. ಪಾಕಿಸ್ತಾನದಾದ್ಯಂತ ಇಂದು ಹೋಲಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪಾಕಿಸ್ತಾನದ ಹಿಂದೂ ಕೌನ್ಸಿಲ್‍ನ ಹೋಲಿ ಮತ್ತು ಪಾಕಿಸ್ತಾನ ದಿನಾಚರಣೆಗೆ ಸಂಬಂಧವಿದೆ. ಆದ್ದರಿಂದ ವರ್ಣರಂಜಿತವಾಗಿ ಕರಾಚಿಯ ಸೈನಿಕ ಬಝಾರಿನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಬುಧವಾರ ಅದ್ದೂರಿಯಾಗಿ ಆಚರಣೆಗೊಳ್ಳಲಿದೆ. ಸಂಜೆ ಆರೂವರೆಯಿಂದ ರಾತ್ರೆ ಹತ್ತೂವರೆ ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ 10ರಂದು ಹೊರಡಿಸಲಾದ ಪತ್ರಿಕಾ ಹೇಳಿಕೆಯಲ್ಲಿ ಪಾಕಿಸ್ತಾನದ ಬೃಹತ್ ಹಿಂದೂ ಕುಟುಂಬವು ರಾಷ್ಟ್ರೀಯ ಧ್ವಜವನ್ನು ಎತ್ತಿಹಿಡಿದು ದೇಶಪ್ರೇಮವನ್ನು ಪ್ರದರ್ಶಿಸುವುದು ಎಂದು ತಿಳಿಸಲಾಗಿದೆ.”ಪಾಕಿಸ್ತಾನದ ಹಿಂದೂ ಸಮುದಾಯ ಅನನ್ಯ ರೀತಿಯಲ್ಲಿ ಹೋಲಿ ಹಬ್ಬವನ್ನು ಆಚರಿಸಲು ನಿರ್ಧರಿಸಿದೆ ಎಂದು ಪಾಕಿಸ್ತಾನದ ಹಿಂದೂ ಕೌನ್ಸಿಲ್‍ನ ಮುಖ್ಯಸ್ಥ ಡಾ. ರಮೇಶ್ ಕುಮಾರ್ ವಂಕವಾಣಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.