ಹೊಸದಿಲ್ಲಿ,ಮಾ.20: ಟ್ರಾಫಿಕ್ ಜಾಮ್ ಆದರೆ ನಿಮ್ಮನ್ನು ಮನೆಯ ಮಹಡಿಗೆ ತಂದು ಬಿಡುವ ಮೋಟಾರ್ಸೈಕಲನ್ನು ಫ್ರೆಂಚ್ ಬೈಕ್ ನಿರ್ಮಾಣ ಕಂಪೆನಿಯೊಂದು ತಯಾರಿಸಿದೆ. ಭೂಮಿಯಲ್ಲಿ ಚಲಾಯಿಸಬಹುದು ಮತ್ತು ಗಾಳಿಯಲ್ಲಿ ಹಾರಿಸಿಕೊಂಡು ಬರಬಹುದು. ಲಝರೆತ್ ಎಲ್ಎಂ -847 ಹೆಸರಿನ ಪ್ಲೈಯಿಂಗ್ ಮೋಟಾರು ಸೈಕಲನ್ನು ಫ್ರೆಂಚ್ ಕಸ್ಟಮ್ ಕಾರ್ ಮತ್ತು ಮೋಟಾರು ಸೈಕಲ್ ಕಂಪೆನಿ ಲುಡೊವಿಕ್ ಲಝರೆತ್ ತಯಾರಿಸಿದೆ.
ಇದನ್ನು ಮೊತ್ತಮೊದಲು ದುಬೈಯಿಗೆ ತರಲಾಗುವುದು. ಇದರ ಬೆಲೆ ಹೆಚ್ಚೇನಿಲ್ಲ 5, 60,000 ಅಮೆರಿಕನ್ ಡಾಲರ್ ಅಂದರೆ ಸುಮಾರು ಮೂರು ಕೋಟಿ 84 ಲಕ್ಷ ರೂಪಾಯಿಯಾಗಿದೆ.
ಗುಂಡಿ ಅದುಮಿದರೆ ಬೈಕ್ ಮೇಲಕ್ಕೆ ಹಾರುತ್ತದೆ. ರಸ್ತೆಯಲ್ಲಿ ಬೈಕ್ನಲ್ಲಿ ಹೋಗುವಾಗ ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿಹಾಕಿಕೊಂಡರೆ ನೀವು ಖಾಲಿ ಜಾಗವನ್ನು ಹುಡುಕಿ ಬೈಕನ್ನು ವಿಮಾನದಂತೆ ಹಾರಿಸಬಹುದಾಗಿದೆ. ಒಂದು ಗುಂಡಿ ಒತ್ತಿದೊಡನೆ ಬೈಕ್ ರೈಡ್ ಟೂ-ಫ್ಲೈ ಮೋಡಿಗೆ ಬರುತ್ತದೆ. ಅರುವತ್ತು ಸೆಕಂಡಿನಲ್ಲಿ ಬೈಕ್ ಭೂಮಿಯಿಂದ ಮೇಲಕ್ಕೇರಲಿದೆ. ಬೈಕ್ನಲ್ಲಿ ನಾಲ್ಕು ಚಕ್ರ ಇದ್ದು ನಡುವೆ ಜೆಟ್ ಇಂಜಿನ್ ಇರಿಸಲಾಗಿದೆ. ಚೇಸಿಸ್ನಲ್ಲಿ ಎರಡು ಜೆಟ್ ಇಂಜಿನ್ಗಳನ್ನು ವಿನ್ಯಾಸಗೊಳಿಸಲಾಗಿದ್ದು ಹೆಚ್ಚು ಭಾರವಿದ್ದರೂ ಸುಲಭವಾಗಿ ಹಾರಾಟ ನಡೆಸಲು ಇದರಿಂದ ಸಾಧ್ಯವಾಗುತ್ತದೆ. ಒಂದು ವೇಳೆ ಇದರ ನಿರ್ಮಾಣಕ್ಕೆ ಹೆಚ್ಚಿನ ಗಮನ ಇರಿಸಿದರೆ ಜೆಟ್ ಪಾವರ್ಡ್ ಕ್ವಾಡ್ಕಾಪ್ಟರ್ ಎಂದು ಕರೆಯಬಹುದು. 140 ಕೆಜಿ ಭಾರದ ಮೊಟಾರು ಸೈಕಲಿನ ಪರೀಕ್ಷಾ ಹಾರಾಟ ಯಶಸ್ವಿಯಾಗಿದ್ದು. ಇದನ್ನು ಒಂದು ಮೀಟರ್ ಎತ್ತರದಲ್ಲಿ ಸುಮಾರು(3.3 ಅಡಿ) ಎತ್ತರದಲ್ಲಿ ಹಾರಾಟ ನಡೆಸಲಾಗಿದೆ. ಇದರ ವೀಡಿಯೋ ಕೂಡ ಹೊರತರಲಾಗಿದೆ.












