ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಆ.1: ಶೇ.88ರಷ್ಟು 2000 ಸಾವಿರ ನೋಟುಗಳು ಮರಳಿ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಜುಲೈ 31ರ ಲೆಕ್ಕ ಪ್ರಕಾರ 42,000 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿಗಳು ಚಲಾವಣೆಯಲ್ಲಿತ್ತು. ಇದರಲ್ಲಿ ಮೇ 19ಕ್ಕೆ ಚಲಾವಣೆಯಲ್ಲಿರುವ ಎರಡು ಸಾವಿರದ ನೋಟುಗಳಲ್ಲಿ ಶೇ. 88 ನೋಟುಗಳು ಮರಳಿ ಬಂದಿವೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ಚಲಾವಣೆಯಲ್ಲಿರುವ 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಮರಳಿವೆ ಎಂದು ಆರ್ ಬಿ ಐ ತಿಳಿಸಿದೆ. ವಿವಿಧ ಬ್ಯಾಂಕುಗಳ ಡಾಟಾ ಪರಿಶೀಲಿಸಿ ಆರ್ ಬಿ ಐ ಈ ಲೆಕ್ಕವನ್ನು ಬಹಿರಂಗಪಡಿಸಿದೆ.
2000 ನೋಟುಗಳನ್ನು ಬದಲಿಸಲು ಮುಂದಿನ ಎರಡು ತಿಂಗಳು ಅವಧಿಯನ್ನು ವಿಸ್ತರಿಸಲಾಗಿದೆ. ಕೊನೆ ದಿನಾಂಕದ ಮೊದಲು ನೋಟುಗಳನ್ನು ಮರಳಿಸಬೇಕೆಂದು ಜನರಿಗೆ ರಿಸರ್ವ್ ಬ್ಯಾಂಕ್ ತಿಳಿಸಿದೆ.
2018-19 ಆರ್ಥಿಕ ವರ್ಷದಿಂದ 2000 ರೂಪಾಯಿ ನೋಟಿನ ಮುದ್ರಣವನ್ನು ರಿಸರ್ವ್ ಬ್ಯಾಂಕ್ ನಿಲ್ಲಿಸಿತ್ತು. ನಂತರ 2023ರ ಮೇಯಲ್ಲಿ ನೋಟು ನಿಷೇಧಿಸಿತು. ನೋಟುಗಳನ್ನು ಬದಲಾಯಿಸಲು 2023 ಸೆಪ್ಟಂಬರ್ ವರೆಗೆ ಸಮಯ ಇದೆ ಎಂದು ಈ ಹಿಂದೆ ರಿಸರ್ವ್ ಬ್ಯಾಂಕ್ ಹೇಳಿತ್ತು. 2000 ರೂಪಾಯಿ ನೋಟುಗಳನ್ನು ಬದಲಾಯಿಸಬೇಕೆಂದು ಆರ್ ಬಿ ಐ ಸೂಚನೆ ನೀಡಿತ್ತು. ಇದು ಕಪ್ಪುಹಣ ತಡೆಯಲು ಸಹಾಯಕವಾಗಿದೆ ಎಂದು ಆರ್ ಬಿ ಐ ಮಾಜಿ ಡೆಪ್ಯುಟಿ ಗವರ್ನರ್ ಹೇಳಿದ್ದರು. ಆದರೆ ಇಂತಹ ವಾದವನ್ನು ರಿಸರ್ವ್ ಬ್ಯಾಂಕ್ ಲೆಕ್ಕಗಳು ನಿರಾಕರಿಸುತ್ತಿವೆ.












