ಶತ್ರುಘ್ನ ಸಿನ್ಹಾಗೆ ಬಿಜೆಪಿಯಿಂದ ಟಿಕೆಟಿಲ್ಲ

0
1593

ಪಾಟ್ನಾ,ಮಾ.23: ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಎನ್‍ಡಿಎ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದ್ದು ಇದರಲ್ಲಿ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾರಿಗೆ ಸ್ಥಾನ ದೊರಕಿಲ್ಲ. ಬಿಹಾರದ ನಲ್ವತ್ತು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಬಿಜೆಪಿ, ಜೆಡಿಯು ಮತ್ತು ಎಲ್‍ಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು ಶತ್ರುಘ್ನ ಸಿನ್ಹಾರನ್ನು ಕೈಬಿಡಲಾಗಿದೆ.

ಬಿಜೆಪಿ ಮತ್ತು ಜೆಡಿಯು 17-17 ಸೀಟುಗಳಲ್ಲಿ ಹಾಗೂ ಎಲ್‍ಜೆಪಿ 6 ಸೀಟುಗಳಲ್ಲಿ ಸ್ಪರ್ಧಿಸಲಿವೆ. ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಶತ್ರುಘ್ನ ಸಿನ್ಹಾರ ಬದಲು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಲೋಕಸಭೆಗೆ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆ ಎಪ್ರಿಲ್ 11ಕ್ಕೆ ಚುನಾವಣೆ ನಡೆಯಲಿದೆ. ಕೊನೆಯ ಹಂತದ ಮತದಾನ ಮಾರ್ಚ್ 19ಕ್ಕೆ ನಡೆಯಲಿದೆ. ಮಾರ್ಚ್ 23 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಬಿಹಾರದಲ್ಲಿ ಎನ್‍ಡಿಎ ಮತ್ತು ಲಾಲೂ ಪ್ರಸಾದ್ ಯಾದವ್ ನೇತೃತ್ವದ ಮಹಾಘಟ್‍ ಬಂಧನ್ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ. ಮಹಾಘಟ್‍ ಬಂಧನ್(ಮಹಾಮೈತ್ರಿಯ) ಸೀಟು ಹಂಚಿಕೆ ಕೂಡ ಪೂರ್ಣಗೊಂಡಿದೆ.